ದೇಶಉತ್ತರ ಪ್ರದೇಶ: ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಬಿಜೆಪಿ ಮುಸ್ಲಿಂ ನಾಯಕಿ ವಿರುದ್ಧ ಫತ್ವಾ ಜಾರಿ
ಗಣೇಶ ಚತುರ್ಥಿ ದಿನದಿಂದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿದ್ದಕ್ಕಾಗಿ ಆಲಿಘಡದ ಮುಸ್ಲಿಂ ನಾಯಕಿ ರೂಬಿ ಆಶಿಫ್ ಖಾನ್ ವಿರುದ್ಧ ದೇವಬಂದ್ ಮುಫ್ತಿ ಅರ್ಷದ್ ಫಾರೂಕಿ ಫತ್ವಾ ಹೊರಡಿಸಿದ್ದಾರೆ. ರೂಬಿ ಆಸಿಫಾ ನಡವಳಿಕೆ ಇಸ್ಲಾಮಿಕ್ ವಿರುದ್ಧವಾಗಿದೆ ಎಂದು ಮುಫ್ತಿ ಹೇಳಿದ್ದಾರೆ. ರೂಬಿ ಆಲಿಘಡದ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿದ್ದಾರೆ.