ರಾಜಕೀಯಶಾಸಕಾಂಗ ಪಕ್ಷ ಸಭೆಗೆ ಮುನ್ನ ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ: ಸಭೆಯಿಂದ ಹೊರನಡೆದ ಯತ್ನಾಳ್, ಜಾರಕಿಹೊಳಿ!
ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಬಿ ವೈ ವಿಜಯೇಂದ್ರ ಅವರ ಆಯ್ಕೆ ಬಗ್ಗೆ ಇಂದು ಶುಕ್ರವಾರ ಬೆಳಗ್ಗೆ ಕಟುವಾಗಿ ಟೀಕಿಸಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಸಿಟ್ಟು ಶಮನವಾದಂತೆ ಕಂಡುಬರುತ್ತಿಲ್ಲ. ವಿಜಯೇಂದ್ರ ಆಯ್ಕೆ ಬಗ್ಗೆ ಇಷ್ಟು ದಿನ ಒಳಗೊಳಗೇ ಕುದಿಯುತ್ತಿದ್ದ ಯತ್ನಾಳ್ ಅವರ ಆಕ್ರೋಶ ಇಂದು ಮಾಧ್ಯಮಗಳ ಮುಂದೆ ಸ್ಫೋಟಗೊಂಡವು.