ರಾಜಕೀಯಬಿಜೆಪಿಯ ಯಾವುದೇ ಶಾಸಕರು ಪಕ್ಷ ಬಿಡಲ್ಲ; ಆಗಸ್ಟ್ 23ಕ್ಕೆ ಬೃಹತ್ ಪ್ರತಿಭಟನೆ: ಬೊಮ್ಮಾಯಿ, ಬಿಎಸ್ ವೈ
ಲೋಕಸಭಾ ಚುನಾವಣೆಗೂ ಮುನ್ನಾ'ಆಪರೇಷನ್ ಹಸ್ತದ ಮಾತುಗಳು ಜೋರಾಗಿ ಕೇಳಿರುತ್ತಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ 2019ರಲ್ಲಿ ಜೆಡಿಎಸ್- ಕಾಂಗ್ರೆಸ್ ಸರ್ಕಾರ ಪತನಗೊಳಿಸಿ ಬಿಜೆಪಿ ಸೇರಿದ್ದ ಎಸ್.ಟಿ. ಸೋಮಶೇಖರ್, ಶಿವರಾಮ್ ಹೆಬ್ಬಾರ್, ಭೈರತಿ ಬಸವರಾಜ, ಗೋಪಾಲಯ್ಯ ಮತ್ತಿತರರಿಗೆ ಕಾಂಗ್ರೆಸ್ ಗಾಳ ಹಾಕುತ್ತಿದೆ ಎನ್ನಲಾಗುತ್ತಿದೆ.