ರಾಜಕೀಯನಮಗೆ ಈವರೆಗೂ ಹೈಕಮಾಂಡ್ ನಯಾ ಪೈಸೆ ಹಣವನ್ನು ಕೇಳಿಲ್ಲ, ಬಿಜೆಪಿ ನಾಯಕರ ಆರೋಪ ಆಧಾರರಹಿತ: ಸಿಎಂ ಸಿದ್ದರಾಮಯ್ಯ
ಮುಂಬರುವ ಪಂಚ ರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಸಂಗ್ರಹ ಮಾಡಿ ಕೊಡಲಾಗುತ್ತಿದೆ, ಬೆಂಗಳೂರಿನಲ್ಲಿ ಇತ್ತೀಚೆಗೆ ಐಟಿ ಇಲಾಖೆ ದಾಳಿ ವೇಳೆ ಸಿಕ್ಕಿದ ಹಣ ಚುನಾವಣೆ ವೆಚ್ಚಕ್ಕೆ ನೀಡಲಾಗಿದ್ದು, ರಾಜ್ಯದ ಕಾಂಗ್ರೆಸ್ ನಾಯಕರು ಹೈಕಮಾಂಡ್ ಆದೇಶ ಮೇರೆಗೆ ಕಳುಹಿಸುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ.