Bit coin Scam

ಬಿಟ್‌ಕಾಯಿನ್ ಹಗರಣ: ಎಸ್ಐಟಿಯಿಂದ ಪೊಲೀಸ್ ಇನ್ಸ್ ಪೆಕ್ಟರ್, ಸೈಬರ್ ಎಕ್ಸ್ ಪರ್ಟ್ ಬಂಧನ
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಳಕಿಗೆ ಬಂದು ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಗೆ ರಚಿಸಲಾಗಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಸೈಬರ್ ತಜ್ಞರನ್ನು ಬಂಧಿಸಿದೆ.

ಬಿಟ್ ಕಾಯಿನ್ ಹಗರಣಕ್ಕೆ ಸಿದ್ದರಾಮಯ್ಯ ಪುತ್ರನನ್ನು ಎಳೆತಂದ ಬಿಜೆಪಿ: ಫೋಟೋ ಸತ್ಯಾಸತ್ಯತೆ ಏನು?
ರಾಜ್ಯದಲ್ಲಿ ನಡೆದಿದೆ ಎನ್ನಲಾದ ಬಿಟ್ ಕಾಯಿನ್ ಹಗರಣದ ಬಗ್ಗೆ ತಾವು ಪ್ರಸ್ತಾಪಿಸಿದ್ದೀರಿ. ಈಗ ನಮಗೆ ಒಂದಿಷ್ಟು ಪ್ರಶ್ನೆಗಳಿವೆ. ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ ಉತ್ತರಿಸಿ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಬಿಟ್ ಕಾಯಿನ್ ಹಗರಣ: ಡಿಜಿಟಲ್ ಟ್ರಯಲ್ ಪತ್ತೆಹಚ್ಚಲು ಇಂಟರ್‌ಪೋಲ್ ನೆರವು?
ಸೈಬರ್ ಕ್ರೈಂ ಬಗ್ಗೆ ಹೆಚ್ಚಿನ ಅರಿವಿಗಾಗಿ ಡಿಜಿಟಲ್ ಸಾಕ್ಷ್ಯಗಳನ್ನು ಪತ್ತೆ ಹಚ್ಚಬೇಕಾಗುತ್ತದೆ. ಈ ಎಲ್ಲ ಎಕ್ಸ್‌ಚೇಂಜ್‌ಗಳು ಮತ್ತು ವೆಬ್‌ಸೈಟ್‌ಗಳ ಸರ್ವರ್‌ಗಳು ವಿದೇಶದಲ್ಲಿರುವುದರಿಂದ ಇಂಟರ್‌ಪೋಲ್‌ನ ನೆರವು ಅಗತ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಟ್ ಕಾಯಿನ್ ಆರೋಪಿಗೆ ನಲಪಾಡ್, ದರ್ಶನ್ ಲಮಾಣಿ ಸಂಪರ್ಕ: ತಮ್ಮ ತಪ್ಪನ್ನು ಬಿಜೆಪಿ ತಲೆಗೆ ಕಟ್ಟುವ ಚಾಳಿ ಕಾಂಗ್ರೆಸ್ ಗೆ!
ಬಿಟ್ ಕಾಯಿನ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ, ಆರೋಪಿ ಶ್ರೀ ಕೃಷ್ಣನನ್ನು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ಮಹಾನ್ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯನವರೇ ಬಿಟ್ ಕಾಯಿನ್ ವಹಿವಾಟಿನ ಬಗ್ಗೆ ತಿಳಿಸಿಕೊಡಲಿ: ಪ್ರತಾಪ ಸಿಂಹ
ಬಿಟ್ ಕಾಯಿನ್ ಅವ್ಯವಹಾರ ಕೇಸು ರಾಜ್ಯದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಮಧ್ಯೆ ತೀವ್ರ ವಾಕ್ಸಮರ ಮತ್ತು ಪರಸ್ಪರ ಕೆಸರೆರಚಾಟಕ್ಕೆ ವಿಷಯವಾಗಿದೆ.

ಸಿಎಂ ಬದಲಾವಣೆ ವಿಚಾರ ಕಾಂಗ್ರೆಸ್ ಪಕ್ಷದ ಪಿತೂರಿಯಷ್ಟೆ, ಇನ್ನು ಒಂದೂವರೆ ವರ್ಷ ಬೊಮ್ಮಾಯಿಯವರೇ ಮುಖ್ಯಮಂತ್ರಿ: ಬಿ ವೈ ವಿಜಯೇಂದ್ರ
ಸಿಎಂ ಬದಲಾವಣೆ ಕೇವಲ ಕಪೋಲಕಲ್ಪಿತ, ರಾಜ್ಯದ ಜನತೆಯ ಹಾದಿ ತಪ್ಪಿಸಲು ಕಾಂಗ್ರೆಸ್ ಮಾಡುತ್ತಿರುವ ಕುತಂತ್ರ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.

ಪ್ರಿಯಾಂಕ್ ಖರ್ಗೆ 'ಬಿಟ್ ಕಾಯಿನ್ ಬಾಂಬ್': ಹಗರಣ ಪಾರದರ್ಶಕವಾಗಿ ತನಿಖೆಯಾದರೆ ಬೊಮ್ಮಾಯಿ ಸಿಎಂ ಪದವಿ ಕಳೆದುಕೊಳ್ಳೋದು ಗ್ಯಾರಂಟಿ!
ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆ ಪಾರದರ್ಶಕವಾದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪದವಿ ಕಳೆದುಕೊಳ್ಳುತ್ತಾರೆ. ಬಿಜೆಪಿಯಲ್ಲಿ ಮೂರನೇ ಮುಖ್ಯಮಂತ್ರಿ ನೇಮಕವಾಗುತ್ತಾರೆ ಎಂಬ ಸ್ಫೋಟಕ ಹೇಳಿಕೆಯನ್ನು ಮಾಜಿ ಸಚಿವ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ.

ಬಿಟ್ ಕಾಯಿನ್ ಹಗರಣ: ಹ್ಯಾಕರ್ ಶ್ರೀಕಿಗೆ ನ್ಯಾಯಾಂಗ ಬಂಧನ
ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಬಂಧಿಸಲಾಗಿದ್ದ ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

