Biporjoy cyclone

'ಬಿಪೊರ್ ಜೋಯ್' ಅಬ್ಬರ: ಗುಜರಾತ್ ನ ಭಾವನಗರ ಜಿಲ್ಲೆಯಲ್ಲಿ ತಂದೆ-ಮಗ ಸಾವು, ಧರೆಗುರುಳಿದ ವಿದ್ಯುತ್ ಕಂಬಗಳು, ಮರಗಳು
ನಿನ್ನೆ ಗುರುವಾರ ಸಂಜೆ ಗುಜರಾತಿನ ಜಖೌ ಬಂದರಿನ ಬಳಿ ಬಿಪೊರ್‌ಜೋಯ್ ಚಂಡಮಾರುತ ತೀವ್ರ ಪ್ರಮಾಣದಲ್ಲಿ ಬೀಸಿ ಭೂಕುಸಿತವನ್ನು ಉಂಟುಮಾಡಿತು, ಗಂಟೆಗೆ 115-125 ಕಿಲೋಮೀಟರ್ ವೇಗದಲ್ಲಿ 140 ಕಿಲೋ ಮೀಟರ್ ಪ್ರದೇಶದವರೆಗೆ ಗಾಳಿ ಬೀಸಿದ್ದು ಭಾರಿ ಮಳೆಯಾಗಿದೆ.

'ಬಿಪೊರ್ ಜೋಯ್' ಚಂಡಮಾರುತ ಮತ್ತಷ್ಟು ದುರ್ಬಲ: ಶೀಘ್ರ ಕ್ಷೀಣಿಸುವ ಸಾಧ್ಯತೆ, ಆದ ಹಾನಿಯೇನು?
ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಭೂಕುಸಿತ ಸೇರಿದಂತೆ ಸಾಕಷ್ಟು ಹಾನಿ ಅವಘಡ ಸಂಭವಿಸಿದ ನಂತರ ಬಿಪೊರ್ ಜೋಯ್ ಚಂಡಮಾರುತ ಇಂದು ಶನಿವಾರ ನಿಧಾನವಾಗಿ ದುರ್ಬಲಗೊಳ್ಳುತ್ತಿದೆ. ಮುಂದಿನ 12 ಗಂಟೆಗಳಲ್ಲಿ ಮತ್ತಷ್ಟು ದುರ್ಬಲಗೊಳ್ಳುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಇಂದು ಗುಜರಾತ್ ತೀರಕ್ಕೆ ಅಪ್ಪಳಿಸಲಿರುವ 'ಬಿಪೊರ್ ಜೋಯ್' ಚಂಡಮಾರುತ: ಶಾಲಾ-ಕಾಲೇಜು, ಕಚೇರಿ, ಧಾರ್ಮಿಕ ಕೇಂದ್ರಗಳು ಬಂದ್
ಭೀಕರ ಪರಿಣಾಮವನ್ನುಂಟುಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿರುವ ಬಿಪೊರ್ ಜೋಯ್ ಚಂಡಮಾರುತ(Cyclone Biparjoy) ಇಂದು ಜೂನ್ 15 ಗುರುವಾರ ಗುಜರಾತ್ ನ ಕಚ್ ಜಿಲ್ಲೆಯ ಜಕ್ಕೂರ್ ಬಂದರಿನಲ್ಲಿ ನೆಲೆಯಾಗಲಿದೆ ಎಂದು ಹೇಳಿದೆ.

ಗುಜರಾತ್ ತೀರಕ್ಕೆ ತಲುಪಿದ 'ಬಿಪೊರ್ ಜೋಯ್' ಚಂಡಮಾರುತ: ನಾಳೆ ಭಾರೀ ಮಳೆ ನಿರೀಕ್ಷೆ, 37 ಸಾವಿರ ಮಂದಿ ಸ್ಥಳಾಂತರ
ಬಿಪೊರ್ ಜೋಯ್ ಚಂಡಮಾರುತವು ಗುಜರಾತ್‌ನ ಕಚ್ ಕರಾವಳಿಯತ್ತ ಅಪ್ಪಳಿಸುತ್ತಿರುವುದರಿಂದ, ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸಮುದ್ರದ ಸಮೀಪ ವಾಸಿಸುವ ಸುಮಾರು 37,800 ಜನರನ್ನು ಇಲ್ಲಿಯವರೆಗೆ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

