ರಾಜ್ಯಬಿಬಿಎಂಪಿ ಬಿಲ್ ಪಾವತಿ ಬಾಕಿ: ನಮಗೆ ನ್ಯಾಯ ಕೊಡಿಸಿ; ಯಡಿಯೂರಪ್ಪ ಭೇಟಿಯಾಗಿ ಗುತ್ತಿಗೆದಾರ ಅಳಲು!
ಮೊನ್ನೆಯಷ್ಟೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಮತ್ತು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಗುತ್ತಿಗೆದಾರರ ಸಂಘವು ಬುಧವಾರ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿತು.