ದೇಶಶೇ.40ರಷ್ಟು ಹಾಲಿ ಸಂಸದರ ವಿರುದ್ಧ ಕ್ರಿಮಿನಲ್ ಕೇಸು ಇವೆ: ಎಡಿಆರ್ ವರದಿಯಿಂದ ಬಹಿರಂಗ
ದೇಶದಲ್ಲಿ ಈಗಿರುವ ಸಂಸದರಲ್ಲಿ ಶೇಕಡಾ 40ಕ್ಕೂ ಹೆಚ್ಚು ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಈ ಪೈಕಿ ಶೇಕಡಾ 25ರಷ್ಟು ಮಂದಿ ಕೊಲೆ, ಕೊಲೆ ಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧದ ಅಪರಾಧಗಳ ಅಡಿಯಲ್ಲಿ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟೋಕ್ ರಿಫಾರ್ಮ್ಸ್ ವರದಿ ಬಹಿರಂಗಪಡಿಸಿದೆ.