Bihar Election 2020

ಬಿಹಾರ ಚುನಾವಣೆ 2020: 7 ಲಕ್ಷ ಮತದಾರರಿಂದ ನೋಟಾ ಆಯ್ಕೆ!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬರೊಬ್ಬರಿ 7 ಲಕ್ಷ ಮತದಾರರು ನೋಟಾ ಒತ್ತಿದ್ದಾರೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಬಿಹಾರ ವಿಧಾನಸಭೆ ಚುನಾವಣೆ: ವಲಸೆ ಕಾರ್ಮಿಕರ ಕೋಪವೇ ನಿತೀಶ್ ಕುಮಾರ್ ಹಿನ್ನಡೆಗೆ ಕಾರಣ!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆಡಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಆಡಳಿತಾ ರೂಢ ಜೆಡಿಯು 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ನಿತೀಶ್ ಕುಮಾರ್ ನೇತೃತ್ವದ ಈ ಹಿನ್ನಡೆಗೆ ಬಿಹಾರದ ವಲಸೆ ಕಾರ್ಮಿಕರ ಕೋಪವೇ ಕಾರಣ ಎಂದು ಹೇಳಲಾಗುತ್ತಿದೆ.

ಬಿಹಾರ ಚುನಾವಣೆ: ತೇಜಸ್ವಿ ಯಾದವ್ ಸಿಎಂ ಕನಸು ಮಣ್ಣು ಮಾಡಿದ ಕಾಂಗ್ರೆಸ್ ಫ್ಲಾಪ್ ಷೋ!
ಮಹಾಘಟ್ ಬಂಧನ್ ಎಂಬ ಮಹಾ ಮೈತ್ರಿ ಮೂಲಕ ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಶತಾಯಗತಾಯ ಸಿಎಂ ಗಾದಿಗೇರಬೇಕು ಎಂಬ ಆರ್ ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಅವರ ಕನಸನ್ನು ಕಾಂಗ್ರೆಸ್ ಪಕ್ಷದ ಫ್ಲಾಪ್ ಷೋ ಮಣ್ಣು ಮಾಡಿದೆ.

ಬಿಹಾರ ಚುನಾವಣೆ: ಈ ವರೆಗೂ ಶೇ.20ರಷ್ಟು ಮಾತ್ರ ಮತ ಎಣಿಕೆ ಆಗಿದೆ, ಸಂಜೆಯವರೆಗೂ ಮುಂದುವರಿಯುತ್ತದೆ ಎಂದ ಚುನಾವಣಾ ಆಯೋಗ
ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭಾ ಚುನಾವಣಾ ಮತ ಎಣಿಕೆ ಕಾರ್ಯ ಸಂಜೆಯವರೆಗೂ ನಡೆಯಲಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಬಿಹಾರ ವಿಧಾನಸಭೆ ಚುನಾವಣೆ: 15ನೇ ಸುತ್ತಿನ ಮತಎಣಿಕೆಯ ಬಳಿಕವೂ ಮುನ್ನಡೆ ಕಾಯ್ದುಕೊಂಡ ಎನ್ ಡಿಎ ಮೈತ್ರಿಕೂಟ
ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭಾ ಚುನಾವಣೆ 2020ರಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ಬಿಜೆಪಿ ಇದೀಗ ಭರ್ಜರಿ ಮುನ್ನಡೆ ಸಾಧಿಸಿದ್ದು, 15ನೇ ಸುತ್ತಿನ ಮತಎಣಿಕೆಯ ಬಳಿಕವೂ 128 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಬಿಹಾರ ಚುನಾವಣಾ ಫಲಿತಾಂಶ: ಘೋಷಣೆಗೂ ಮೊದಲೇ ಸೋಲಿಗೆ ಕೊರೋನಾ ಕಾರಣ ಎಂದ ಜೆಡಿಯು ವಕ್ತಾರ
ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮತ್ತು ತೇಜಸ್ವಿ ಯಾದವ್ ರ ಮಹಾ ಘಟ್ ಬಂಧನ್ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿರುವಂತೆಯೇ ಇತ್ತ ಜೆಡಿಯು ಮುಖಂಡರೊಬ್ಬರು ತಮ್ಮ ಪಕ್ಷದ ಸೋಲಿಗೆ ಕೊರೋನಾ ವೈರಸ್ ಸಾಂಕ್ರಾಮಿಕ ಕಾರಣ ಎಂದು ಹೇಳಿ ಸುದ್ದಿಗೆ ಗ್ರಾಸವಾಗಿದ್ದಾರೆ.

ಬಿಹಾರ ಚುನಾವಣೆ: ನಿತೀಶ್ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಆರಂಭಿಕ ಹಿನ್ನಡೆ, ತೇಜಸ್ವಿ ಯಾದವ್ ರ ಮಹಾ ಘಟ್ ಬಂಧನ್ ಗೆ ಮುನ್ನಡೆ
ತೀವ್ರ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆ ಚುನಾವಣಾ ಫಲಿತಾಂಶ ಘೋಷಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಸಿಎಂ ನಿತೀಶ್ ಕುಮಾರ್ ನೇತೃತ್ವದ ಎನ್ ಡಿಎ ಮೈತ್ರಿಕೂಟಕ್ಕೆ ಆರಂಭಿಕ ಹಿನ್ನಡೆಯಾಗಿದೆ.

ಎನ್ಡಿಎ ಸರ್ಕಾರ ಮಾತ್ರ ಬಿಹಾರದ ಯುವಕರಿಗೆ ಅವಕಾಶ ಮತ್ತು ಭದ್ರತೆ ಒದಗಿಸಲಿದೆ: ಪ್ರಧಾನಿ ಮೋದಿ
'ಆತ್ಮನಿರ್ಭರ ಭಾರತ'ದಲ್ಲಿ ಸರ್ಕಾರದ ಉದ್ದೇಶ ಕಾನೂನು ಸಂರಕ್ಷಣೆ, ಬಡವರ ಕಲ್ಯಾಣ, ಯುವಕರಿಗೆ ಹೆಚ್ಚಿನ ಅವಕಾಶ ಮತ್ತು ಮಹಿಳೆಯರ ಭದ್ರತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.

ನನ್ನ ಹೋರಾಟ ನಿತೀಶ್ ವಿರುದ್ಧ ಮಾತ್ರ, ಕೊನೆಯ ಉಸಿರಿರುವವರೆಗೂ ಮೋದಿ ಅವರೊಂದಿಗೆ ಇರುತ್ತೇನೆ: ಚಿರಾಗ್ ಪಾಸ್ವಾನ್
ನನ್ನ ಹೋರಾಟ ಏನಿದ್ದರೂ ನಿತೀಶ್ ಕುಮಾರ್ ವಿರುದ್ಧ ಮಾತ್ರ, ಆದರೆ ನನ್ನ ಕೊನೆಯ ಉಸಿರಿರುವವರೆಗೂ ಪ್ರಧಾನಿ ಮೋದಿ ಜೊತೆಗಿರುತ್ತೇನೆ ಎಂದು ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.

