Bihar Assembly Polls

ಬಿಹಾರ ವಿಧಾನಸಭೆ ಚುನಾವಣೆ: NDA ಜನರಿಗೆ ಲಂಚ ನೀಡಿ ಮತಗಳ ಖರೀದಿ; ಜನ್ ಸುರಾಜ್ ಪಕ್ಷ ಮೊದಲ ಪ್ರತಿಕ್ರಿಯೆ!
ಭರ್ಜರಿ ಪ್ರಚಾರ ಹಾಗೂ ರಾಜ್ಯದಲ್ಲಿನ ನಿರುದ್ಯೋಗ, ವಲಸೆ ಮತ್ತು ಕೈಗಾರಿಕೆಗಳ ಕೊರತೆಯಂತಹ ಸಮಸ್ಯೆಗಳನ್ನು ಎತ್ತಿದರೂ ಪಕ್ಷ ಮತಗಳನ್ನು ಕ್ರೋಢೀಕರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದೆ.

ಬಿಹಾರದಲ್ಲಿ NI-MO ಮೋಡಿ: NDA ಪ್ರಚಂಡ ಗೆಲುವು; ಅತಿದೊಡ್ಡ ಪಕ್ಷವಾಗಿ BJP; ಕುಸಿದ ತೇಜಸ್ವಿ ಯಾದವ್; Congress ಸ್ಥಿತಿ ಹೀನಾಯ!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ NDA ಪ್ರಚಂಡ ಗೆಲುವು ಸಾಧಿಸಿದೆ. 243 ಸ್ಥಾನಗಳಲ್ಲಿ 202 ಸ್ಥಾನಗಳಲ್ಲಿ NDA ಮುನ್ನಡೆ ಸಾಧಿಸಿದೆ. ಇನ್ನು ಭಾರತೀಯ ಜನತಾ ಪಕ್ಷ (BJP) ಸುಮಾರು 95 ಪ್ರತಿಶತದಷ್ಟು ಸ್ಟ್ರೈಕ್ ರೇಟ್ನೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Bihar polls: ಎನ್ಡಿಎ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಲಿ; ಇಂಡಿಯಾ ಬ್ಲಾಕ್ ಸಿಎಂ ಅಭ್ಯರ್ಥಿ ತೇಜಸ್ವಿ ಯಾದವ್ ಸವಾಲು!
ಎನ್ಡಿಎಯ ಕಾರ್ಯಸೂಚಿ ಮತ್ತು ದೃಷ್ಟಿಕೋನವನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಅವರು ಮಹಾಘಟಬಂಧನದ ನಾಯಕರ ವಿರುದ್ಧ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ ಮತ್ತು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಸಮಯದಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಹಾಲಿ, ಮಾಜಿ ಶಾಸಕರು ಸೇರಿ 16 ಮಂದಿಯನ್ನು ಉಚ್ಛಾಟಿಸಿದ JDU
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಶಾಸಕ ಗೋಪಾಲ್ ಮಂಡಲ್ ಸೇರಿದಂತೆ 16 ನಾಯಕರನ್ನು ಪಕ್ಷದಿಂದ ಉಚ್ಛಾಟಿಸಿದೆ.

ಇಂಡಿಯಾ ಬ್ಲಾಕ್ 'ಒನ್ ಮ್ಯಾನ್ ಶೋ' ಅಲ್ಲ, ಜನರ ಮೈತ್ರಿ: ತೇಜಸ್ವಿ ಸಿಎಂ ಅಭ್ಯರ್ಥಿ ಘೋಷಣೆ ಬೆನ್ನಲೇ ಕಾಂಗ್ರೆಸ್ ಅಪಸ್ವರ?
ಆರ್ಜೆಡಿಯ ತೇಜಸ್ವಿ ಯಾದವ್ ಮಹಾಮೈತ್ರಿಕೂಟದ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಪಸ್ವರ ಎತ್ತಿದ್ದು, ಇಂಡಿ ಕೂಟ ಒನ್ ಮ್ಯಾನ್ ಶೋ ಅಲ್ಲ, ಆದರೆ ಪರಸ್ಪರ ಗೌರವ, ಎಲ್ಲರನ್ನೂ ಒಳಗೊಂಡ ಪ್ರಾತಿನಿಧ್ಯ ಮತ್ತು ಹಂಚಿಕೆಯ ಅಧಿಕಾರದ ತತ್ವಗಳನ್ನು ಆಧರಿಸಿದ ಜನರ ಮೈತ್ರಿಕೂಟ ಎಂದು ಹೇಳಿದೆ.

Bihar polls: ಸೀಟು ಹಂಚಿಕೆ ಗೊಂದಲ ಮಧ್ಯೆ 143 ಅಭ್ಯರ್ಥಿಗಳ ಪಟ್ಟಿ ಘೋಷಿಸಿದ RJD; 6 ಸ್ಥಾನಗಳಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ
ಲಾಲೂ ಪ್ರಸಾದ್ ಯಾದವ ಕುಟುಂಬಕ್ಕೆ ಆಳವಾದ ರಾಜಕೀಯ ಮತ್ತು ಭಾವನಾತ್ಮಕ ಮಹತ್ವವನ್ನು ಹೊಂದಿರುವ ಕ್ಷೇತ್ರವಾದ ವೈಶಾಲಿ ಜಿಲ್ಲೆಯ ರಾಘೋಪುರ ವಿಧಾನಸಭಾ ಸ್ಥಾನದಿಂದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರನ್ನು ಕಣಕ್ಕಿಳಿಸಲಾಗಿದೆ.

Bihar polls: ಗೆಲ್ಲುವುದಿಲ್ಲ ಎಂಬುದು ತಿಳಿದಿದ್ದರಿಂದ ಪ್ರಶಾಂತ್ ಕಿಶೋರ್ ಸ್ಪರ್ಧಿಸುತ್ತಿಲ್ಲ; ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಹಿಂದಿನ ದಿನ, ಪ್ರಶಾಂತ್ ಕಿಶೋರ್, ತಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ದೊಡ್ಡ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದರು.

ಬಿಹಾರ ಚುನಾವಣೆಗೂ ಮುನ್ನ JDU ಶಾಸಕ ರಾಜೀನಾಮೆ; RJD ಸೇರ್ಪಡೆ
ಸಂಜೀವ್ ಕುಮಾರ್ ಅವರ ಸೇರ್ಪಡೆಯು ಖಗಾರಿಯಾ ಜಿಲ್ಲೆಯಲ್ಲಿ ಪಕ್ಷದ ಚುನಾವಣಾ ನಿರೀಕ್ಷೆಗಳನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ತೇಜಸ್ವಿ ಹೇಳಿದರು.

CWC ಸಭೆ: ಬಿಹಾರ ವಿಧಾನಸಭಾ ಚುನಾವಣೆ ಮೋದಿ ಸರ್ಕಾರದ 'ಭ್ರಷ್ಟ ಆಡಳಿತ' ಅಂತ್ಯಕ್ಕೆ ನಾಂದಿಯಾಗಲಿದೆ; ಮಲ್ಲಿಕಾರ್ಜುನ ಖರ್ಗೆ
ಪ್ರಧಾನಿ ಮೋದಿಯವರು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ನನ್ನ ಸ್ನೇಹಿತ ಎಂದು ಹೆಮ್ಮೆಯಿಂದ ಹೇಳುತ್ತಾರೆ. ಆದರೆ, ಅದೇ ಸ್ನೇಹಿತ ಇದೀಗ ಭಾರತಕ್ಕೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ.

