BIFFES 2014

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ವಿದ್ಯುಕ್ತ ಚಾಲನೆ

ಸಮ್ಮರ್ ಚಿತ್ರದ ಟ್ರೇಲರ್
ಸಮ್ಮರ್ ಚಿತ್ರವು 16 ವರ್ಷದ ಯುವತಿ ಮತ್ತು ಆಕೆಯ ಪುಟ್ಟ ಕುಗ್ರಾಮದ ಕಥಾ ಹಂದರವನ್ನು ಹೊಂದಿದ್ದು, ಯುವತಿ ವಾಸಿಸುವ ಗ್ರಾಮವು ವಿದ್ಯುತ್ ಉತ್ಪಾದನೆಯಿಂದ ಖ್ಯಾತಿ ಗಳಿಸಿರುತ್ತದೆ. ಕೂಗಳತೇ ದೂರದಲ್ಲೇ ಇರುವ ಗ್ರಾಮಗಳ ಯುವಕ ಯುವತಿಯರು ಬೇಸಿಗೆ ರಜೆಯಲ್ಲಿ ಒಟ್ಟಿಗೇ ಸೇರಿ ಬೀಚ್‌ನಲ್ಲಿ ಮೋಜು ಮಸ್ತಿ ಮಾಡುತ್ತಾರೆ. ಈ ವೇಳೆ ಈ ಯುವತಿ ಒಂಟಿತನ ಬೇಕೆಂದು ಆಪೇಕ್ಷಿಸುತ್ತಾಳೆ. ಈ ಸಂದರ್ಭದಲ್ಲಿ ಯುವತಿಗೆ ಗೆಳೆಯನೊಬ್ಬನ ಪರಿಚಯವಾಗುತ್ತದೆ, ಪರಿಚಯ ಸ್ನೇಹಕ್ಕೆ ತಿರುಗುತ್ತದೆ. ಇಂದು ಸಮ್ಮರ್ ಚಿತ್ರದ ಸಂಕ್ಷಿಪ್ತ ಕಥಾ ಹಂದರವಾಗಿದ್ದು, ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ.

ಸನ್ ಆಫ್ ಟ್ರಾಕೋ ಚಿತ್ರದ ಟ್ರೇಲರ್
ಚಿಲಿ ಮೂಲದ 14 ವರ್ಷದ ಓರ್ವ ಬಾಲಕ ತನ್ನ ತಂದೆಯ ಕಾರಣದಿಂದಾಗಿ ಸಮಾಜದಿಂದ ಮಾನಸಿಕ ಹಿಂಸೆಗೆ ಒಳಗಾಗುತ್ತಿರುತ್ತಾನೆ. ಹೀಗಾಗಿ ಒಂದು ದಿನ ಆ ಬಾಲಕ ತನ್ನ ತಂದೆಯ ಕುರಿತ ಸತ್ಯಾಂಶಗಳನ್ನು ತಿಳಿಯಲೇ ಬೇಕು ಎಂದು ನಿರ್ಧರಿಸುತ್ತಾನೆ. ತನ್ನ ತಂದೆಯ ಕುರಿತ ರಹಸ್ಯ ತಿಳಿವ ದಾರಿಯಲ್ಲಿ ಆ ಬಾಲಕ ಎದುರಿಸುವ ಸಾವಾಲುಗಳೇನು ಎಂಬುದು ಸನ್ ಆಫ್ ಟ್ರಾಕೋ ಚಿತ್ರದ ಸಂಕ್ಷಿಪ್ತ ಕಥಾ ಹಂದರ. ಈ ಚಿತ್ರವು ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪ್ರದರ್ಶನವಾಗುತ್ತಿದೆ.

ಕೋಕಿಲಾ ಚಿತ್ರದ ಟ್ರೇಲರ್
ಚಿತ್ರವು ವೈದ್ಯಕೀಯ ವಿದ್ಯಾರ್ಥಿನಿ ಕೋಕಿಲಾ ಮತ್ತು ವಿಜಯಕುಮಾರ್ ಎಂಬ ಇಂಜಿನಿಯರ್ ನಡುವಿನ ಪ್ರೀತಿಯ ಕುರಿತಾಗಿದ್ದು, ಕೋಕಿಲಾ ಪಾತ್ರದಲ್ಲಿ ಶೋಭಾ ಮತ್ತು ವಿಜಯ್ ಕುಮಾರ್ ಪಾತ್ರದಲ್ಲಿ ನಟ ಕಮಲ್ ಹಾಸನ್ ನಟಿಸಿದ್ದಾರೆ. ಈ ಚಿತ್ರವು ಖ್ಯಾತ ನಿರ್ದೇಶಕ ಬಾಲು ಮಹೇಂದ್ರ ಅವರ ನಿರ್ದೇಶನದ ಮೊಟ್ಟ ಮೊದಲ ಚಿತ್ರವಾಗಿದ್ದು, 1977ರಲ್ಲಿ ಚಿತ್ರವು ತೆರೆಕಂಡಿತ್ತು. ಈ ಚಿತ್ರ ಶುಕ್ರವಾರ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳುತ್ತಿದೆ.

'ಡಿಸೆಂಬರ್-1' ಚಿತ್ರದ ಟ್ರೇಲರ್
ಚಿತ್ರವು ರೊಟ್ಟಿ ಮಾರಿ ಜೀವನ ನಡೆಸುವ ದೇವಕ್ಕ ಎಂಬ ಮಹಿಳೆಯ ಕುರಿತಾಗಿದ್ದು, ಸಂದರ್ಭವೊಂದರಲ್ಲಿ ರಾಜ್ಯದ ಮುಖ್ಯಮಂತ್ರಿಗಳು ದೇವಕ್ಕನ ಮನೆಗೆ ಆಗಮಿಸುತ್ತಾರೆ. ಈ ವೇಳೆ ದೇವಕ್ಕನ ಜೀವನದಲ್ಲಿ ನಡೆಯುವ ಕೆಲ ಘಟನೆಗಳು ಆಕೆಯ ಜೀವನವನ್ನು ಹೇಗೆ ಬದಲಿಸುತ್ತದೆ ಎಂಬುದು ಡಿಸೆಂಬರ್-1 ಚಿತ್ರದ ಕಥಾ ಹಂದರವಾಗಿದೆ. ಚಿತ್ರವನ್ನು ನಿರ್ದೇಶಕ ಪಿ.ಶೇಷಾದ್ರಿ ಅವರು ನಿರ್ದೇಶಿಸಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿದೆ.

ಮಿ. ಕಪ್ಲಾನ್ ಚಿತ್ರದ ಟ್ರೇಲರ್
ಮೂಲತಃ ಉರುಗ್ವೆಯವನಾದ ಕಪ್ಲಾನ್ 2ನೇ ಮಹಾಯುದ್ಧದಲ್ಲಿ ನಾಜಿಗಳ ಮೇಲೆ ನಡೆಯುತ್ತಿದ್ದ ಕೌರ್ಯದಿಂದಾಗಿ ದಕ್ಷಿಣ ಅಮೆರಿಕಕ್ಕೆ ಪಲಾಯನ ಮಾಡಿದವನಾಗಿರುತ್ತಾನೆ. ಪ್ರಸ್ತುತ ಬೀಚ್ ಬಳಿ ಇರುವ ಬಾರ್ ಅವನ ಕುಟುಂಬದ ಜೀವನಾಧಾರವಾಗಿದ್ದು, 76 ವರ್ಷದ ಕಪ್ಲಾರ್ ತನ್ನ ಇಳಿವಯಸ್ಸಿನಲ್ಲಿ ತನ್ನ ಇತಿಹಾಸದ ಮೆಲುಕು ಹಾಕುತ್ತಿರುತ್ತಾನೆ. ಇತಿಹಾಸವನ್ನು ಮರುಕಳಿಸುವ ನಿಟ್ಟಿನಲ್ಲಿ ಜರ್ಮನ್ ಪ್ರಜೆಯನ್ನು ಅಪಹರಿಸಿ ಇಸ್ರೇಲಿಗೆ ಕರೆದೊಯ್ಯುವ ತವಕದಲ್ಲಿರುತ್ತಾನೆ. ಇದು ಕಪ್ಲಾನ್ ಚಿತ್ರದ ಸಂಕ್ಷಿಪ್ತ ಕಥೆಯಾಗಿದ್ದು, ಈ ಚಿತ್ರ ನಾಳೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಂಗಳೂರು ಸಿನಿಮೋತ್ಸವದಲ್ಲಿ ಭಾರತೀಯ ಚಿತ್ರಗಳು

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2014
ಡಿಸೆಂಬರ್ 4ರಿಂದ ಆರಂಭಗೊಳ್ಳಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಕುರಿತ ಪ್ರೋಮೋ


