ದೇಶ'ಮಕ್ಕಳನ್ನು ದೇಶ ಸೇವೆಗೆ ಕಳುಹಿಸಿದ್ದೇವೆ, ಇಂದು ನಮ್ಮನ್ನು ಉಗ್ರರಂತೆ ನೋಡುತ್ತಿದ್ದಾರೆ': ರೈತ ಭೀಮ್ ಸಿಂಗ್ ಅಳಲು
ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೆಹಲಿಯ ಬುರಾರಿಯ ನಿರಂಕರಿ ಮೈದಾನದಲ್ಲಿ ಸಾವಿರಾರು ರೈತರು ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅವರಲ್ಲಿ 72 ವರ್ಷದ ಉತ್ತರ ಪ್ರದೇಶದ ರೈತ ಭೀಮ್ ಸಿಂಗ್ ಕೂಡ ಒಬ್ಬರು.