Bharat jodo

ಘಟನಾವಳಿಗಳನ್ನು ಅರ್ಥಮಾಡಿಕೊಳ್ಳಿ: ಪ್ರಧಾನ ಮಂತ್ರಿ ಮೋದಿಯವರ ಕೋವಿಡ್ ಸಭೆಗೆ ಕಾಂಗ್ರೆಸ್ ವ್ಯಂಗ್ಯ
ಭಾರತ್ ಜೋಡೋ ಯಾತ್ರೆ ದೆಹಲಿಗೆ ಪ್ರವೇಶಿಸುವ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ವೈರಸ್ ಸಂಬಂಧಿತ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಕೋವಿಡ್ ಹರಡುವ ಕುರಿತು ಆರೋಗ್ಯ ಸಚಿವರು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಘಟನಾವಳಿಗಳನ್ನು ಅರ್ಥಮಾಡಿಕೊಳ್ಳಿ ಎಂದು ಕುಟುಕಿದೆ.

ರಾಹುಲ್ ಮಾಡುತ್ತಿರುವುದು ಭಾರತ್ ಜೋಡೋ ಯಾತ್ರೆ ಅಲ್ಲ, ಪ್ರಾಯಶ್ಚಿತ್ತ ಯಾತ್ರೆ: ಜೆಪಿ ನಡ್ಡಾ
ತಮ್ಮ ಪೂರ್ವಜರು ಮತ್ತು ಕಾಂಗ್ರೆಸ್ ಭಾರತವನ್ನು ವಿಭಜಿಸಿದ್ದರಿಂದ ಪಶ್ಚಾತ್ತಾಪ ಪಡುವ ಸಲುವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆ ಕೈಗೊಂಡಿದ್ದಾರೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಅವರು ವ್ಯಂಗ್ಯವಾಡಿದ್ದಾರೆ.

ಅಂದು ಸಿದ್ದರಾಮಯ್ಯ...ಇಂದು ಡಿ ಕೆ ಶಿವಕುಮಾರ್ ಕೈ ಹಿಡಿದು ಭಾರತ್ ಜೋಡೋ ಯಾತ್ರೆಯಲ್ಲಿ ಓಡಿದ ರಾಹುಲ್ ಗಾಂಧಿ
ಇಂದು ತುಮಕೂರು ಜಿಲ್ಲೆಯ ಪೊಚ್ಚಕಟ್ಟೆಯಿಂದ ಭಾರತ್ ಜೋಡೋ ಯಾತ್ರೆ ಆರಂಭಿಸಿದ ರಾಹುಲ್ ಗಾಂಧಿ ಮತ್ತು ಕೈ ನಾಯಕರು ಕಾರ್ಯಕರ್ತರು ಹುಳಿಯಾರು, ಚಿಕ್ಕನಾಯಕನಹಳ್ಳಿಗೆ ತಲುಪಿದರು.

ಯಾರು 'ಭಾರತ್ ಜೋಡೋ' ಮಾಡಿದ್ದಾರೆ, ಯಾರು 'ತೋಡೋ' ಮಾಡಿದ್ದಾರೆಂದು ಎಲ್ಲರಿಗೂ ತಿಳಿದಿದೆ: ಸಿಎಂ ಬೊಮ್ಮಾಯಿ
ಯಾರು ಭಾರತ್ ಜೋಡೋ ಮಾಡಿದ್ದಾರೆ, ಯಾರು ಭಾರತ್ ತೋಡೋ ಮಾಡಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

'ನನ್ನ ನಿರ್ಧಾರ ಮಾಡಿದ್ದೇನೆ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸದಿದ್ದರೆ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ
ಕಾಂಗ್ರೆಸ್ ನಲ್ಲಿ ಅಕ್ಟೋಬರ್ ತಿಂಗಳಲ್ಲಿ ರಾಷ್ಟ್ರಾಧ್ಯಕ್ಷರ ಚುನಾವಣೆ ನಡೆಯಲಿದೆ. ಮುಂದಿನ ಅಧ್ಯಕ್ಷರಾಗಬೇಕೆ, ಬೇಡವೇ ಎಂಬ ಬಗ್ಗೆ ನಾನು ನಿರ್ಧಾರ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸದಿದ್ದಲ್ಲಿ ನಿಮ್ಮ ಮುಂದೆ ಕಾರಣವನ್ನು ನೀಡುತ್ತೇನೆ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಕುತೂಹಲ ಉಳಿಸಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ 'ವಿಲೇಜ್ ಕುಕಿಂಗ್ ಚಾನೆಲ್' ಯೂಟ್ಯೂಬರ್ಸ್ ಭೇಟಿಯಾದ ರಾಹುಲ್ ಗಾಂಧಿ!
ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಜನಪ್ರಿಯ ಯೂಟ್ಯೂಬ್ ಚಾನೆಲ್ 'ವಿಲೇಜ್ ಕುಕಿಂಗ್ ಚಾನೆಲ್' ಚಾನೆಲ್ ನ ಸದಸ್ಯರನ್ನು ಭೇಟಿ ಮಾಡಿದರು.

ರಾಹುಲ್ ಗಾಂಧಿಗೆ ಏಕೀಕರಣ ಬೇಕಾದರೆ ಪಾಕಿಸ್ತಾನಕ್ಕೆ ಭಾರತ್ ಜೋಡೋ ಯಾತ್ರೆ ಮಾಡಬೇಕು: ಅಸ್ಸಾಂ ಸಿಎಂ
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಏಕೀಕರಣ ಬೇಕಾದರೆ ಭಾರತ್ ಜೋಡೋ ಯಾತ್ರೆಗೆ (Bharat Jodo Yatra) ಪಾಕಿಸ್ತಾನಕ್ಕೆ ಹೋಗಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಬುಧವಾರ ಟ್ವೀಟ್ ಮಾಡಿದ್ದಾರೆ.

‘ನಾವು ಯಾರನ್ನೂ ಎಐಸಿಸಿ ಚುನಾವಣೆಗೆ ನಿಲ್ಲುವುದನ್ನು ತಡೆದಿಲ್ಲ’: ಸಂದರ್ಶನದಲ್ಲಿ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್
ತೀವ್ರ ಚರ್ಚೆಗೆ ಗ್ರಾಸವಾಗಿರುವ ಎಐಸಿಸಿ ಚುನಾವಣೆಗೆ ನಿಲ್ಲುವುದರಿಂದ ಯಾವ ನಾಯಕರನ್ನೂ ನಾವು ತಡೆದಿಲ್ಲ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಕಾಂಗ್ರೆಸ್ ನಿಂದ ಭಾರತ್ ಜೋಡೋ ಯಾತ್ರೆ: ನಾಳೆಯಿಂದ ಎರಡು ದಿನ ಬೆಂಗಳೂರಿನಲ್ಲಿ ನಾಯಕರಿಂದ ಸರಣಿ ಸಭೆ
ಕಾಂಗ್ರೆಸ್ ನಲ್ಲೀಗ ಭಾರತ್ ಜೋಡೋ (Bharat Jodo) ಯಾತ್ರೆಯ ಸಿದ್ಧತೆ. ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ, 2023ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ಮತ್ತು ಇತರ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚಿಸಲು ಕಾಂಗ್ರೆಸ್ ನಾಯಕರು ನಾಳೆ ಮತ್ತು ನಾಡಿದ್ದು ಬೆಂಗಳೂರಿನಲ್ಲಿ ಸರಣಿ ಸಭೆಗಳನ್ನು ನಡೆಸಲಿದ್ದಾರೆ.

