ಕ್ರಿಕೆಟ್ಕೊಹ್ಲಿಗೆ ಸರಿಸಾಟಿ ಯಾರೂ ಇಲ್ಲ: ಪಾಕ್ ಮಾಜಿ ನಾಯಕ ಸರ್ಫರಾಜ್
ಇತ್ತೀಚೆಗೆ ಸದ್ಯ ವಿಶ್ವ ಕ್ರಿಕೆಟ್ನಲ್ಲಿ ಯಾರು ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಇದರಲ್ಲಿ ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಮತ್ತು ಕೇನ್ ವಿಲಿಯಮ್ಸನ್ ನಡುವೆ ಭಾರಿ ಪೈಪೋಟಿ ಇದೆ. ಆದರೆ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯೇ ಸರ್ವಶ್ರೇಷ್ಠ ಎಂದು ಸರ್ಫರಾಜ್ ಆಯ್ಕೆ ಮಾಡಿದ್ದು, ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂದಿದ್ದಾರೆ