ಕ್ರಿಕೆಟ್ಇಂಗ್ಲೆಂಡ್ ವಿರುದ್ಧದ ಟಿ20ಯಲ್ಲಿ ಅದ್ಭುತ ಕ್ಯಾಚ್ ಮೂಲಕ ಭಾರತದ ಹರ್ಲೀನ್ ಡಿಯೋಲ್ ಮೋಡಿ: ವಿಡಿಯೋ ವೈರಲ್!
ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಹರ್ಲೀನ್ ಡಿಯೋಲ್ ಶುಕ್ರವಾರ ರಾತ್ರಿ ಮೈದಾನದಲ್ಲಿ ಮಹೋನ್ನತ ಪ್ರಯತ್ನದ ನಂತರ ಹಿಡಿದ ಕ್ಯಾಚ್ ಒಂದು ಸಾಕಷ್ಟು ವೈರಲ್ ಆಗಿದೆ. ಇಂಗ್ಲೆಂಡ್ ನ ಅಮಿ ಜೋನ್ಸ್ ಅವರನ್ನು ಔಟ್ ಮಾಡಲು ಈ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಅಲ್ಲದೆ ಈ ಮೂಲಕ ಇಂಗ್ಲೆಂಡ್ ಆಟಗಾರ್ತು ಅರ್ಧಶತಕ ಬಾರಿಸುವುದನ್ನು ತಪ್ಪಿಸಿದ್ದಾರೆ.