ಕ್ರಿಕೆಟ್ಡಿಆರ್ಎಸ್ ವಿವಾದ: ಕೊಹ್ಲಿ, ಸ್ಮಿತ್ ವಿರುದ್ಧ ಐಸಿಸಿಯಿಂದ ಯಾವುದೇ ಶಿಸ್ತುಕ್ರಮ ಇಲ್ಲ!
ಬೆಂಗಳೂರು ಟೆಸ್ಟ್ ಪಂದ್ಯದ ವೇಳೆ ಡಿಆರ್ ಎಸ್ ಮನವಿಗೆ ಸಂಬಂಧಿಸಿದಂತೆ ಎದ್ದಿದ್ದ ವಿವಾದ ಸಂಬಂಧ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸಿಸ್ ನಾಯಕ ಸ್ಟೀವ್ ಸ್ಮಿತ್ ವಿರುದ್ಧ ಯಾವುದೇ ರೀತಿಯ ಶಿಸ್ತುಕ್ರಮ ಕೈಗೊಳ್ಳುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಿಳಿಸಿದೆ.