Bengaluru schools

ಹುಸಿ ಬಾಂಬ್ ಇಮೇಲ್: ಶಾಲಾ ಆವರಣವನ್ನು ಅನ್ಯ ಚಟುವಟಿಕೆಗಳಿಗೆ ನೀಡದಂತೆ ಶಿಕ್ಷಣ ಇಲಾಖೆ ಆದೇಶ
ಕಳೆದ ಡಿಸೆಂಬರ್ 1 ರಂದು ಬೆಂಗಳೂರಿನ 68 ಶಾಲೆಗಳಿಗೆ ನಕಲಿ ಬಾಂಬ್ ಇಮೇಲ್ ಬಂದ ನಂತರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DSEL) ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ಶೈಕ್ಷಣಿಕ ಮತ್ತು ವಿದ್ಯಾರ್ಥಿಗಳ ಪಠ್ಯೇತರ ಉದ್ದೇಶಗಳಿಗೆ ಹೊರತುಪಡಿಸಿ ಬೇರೆ ಅನ್ಯ ಉದ್ದೇಶಗಳಿಗೆ ತಮ್ಮ ಕ್ಯಾಂಪಸ್ ಗಳಲ್ಲಿ ಅವಕಾಶ ನೀಡದಂತೆ ಆದೇಶ ಹೊರಡಿಸಿದೆ.

ರಾಜ್ಯಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ನೀಡುವಂತೆ ಶಿಕ್ಷಣ ಇಲಾಖೆ ಸುತ್ತೋಲೆ
ಮಣಿಪುರ ರಾಜ್ಯದಲ್ಲಿನ ಪ್ರಸ್ತುತ ಪ್ರಕ್ಷುಬ್ದ ಪರಿಸ್ಥಿತಿಯಿಂದಾಗಿ ರಾಜ್ಯಕ್ಕೆ ಬರುವ ಮಣಿಪುರದ ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿಯನ್ನು ನೀಡಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಮಾನ್ಯತೆಯ ಸಮಸ್ಯೆಯನ್ನು ಮೇ 31 ರ ವೇಳೆಗೆ ಬಗೆಹರಿಸಿಕೊಳ್ಳಿ ಇಲ್ಲವೇ ಬಂದ್ ಮಾಡಿ; ಅನಧಿಕೃತ ಶಾಲೆಗಳಿಗೆ ಸೂಚನೆ
ಮಾನ್ಯತೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದಕ್ಕೆ ಅನಧಿಕೃತ ಖಾಸಗಿ ಶಾಲೆಗಳಿಗೆ ಶಾಲಾ ಶಿಕ್ಷಣ ಇಲಾಖೆ ಮೇ.31 ರ ವರೆಗೆ ಗಡುವು ನೀಡಿದೆ.

