ರಾಜ್ಯಮೇಲ್ಮನೆಯಲ್ಲಿ ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ 2020 ಅಂಗೀಕಾರ
ನ್ಯಾಯಾಲಯದ ನಿರ್ದೇಶನದಂತೆ ಭಿಕ್ಷುಕರು ಮಾನಸಿಕ ಅಸ್ವಸ್ಥರಾದರೆ, ಕುಷ್ಠರೋಗ ಹಾಗೂ ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿದ್ದರೆ, ಬಂಧನದಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ಉದ್ದೇಶವನ್ನೊಳಗೊಂಡ ಕರ್ನಾಟಕ ಭಿಕ್ಷಾಟನೆ ನಿಷೇಧ (ತಿದ್ದುಪಡಿ) ವಿಧೇಯಕ 2020ಕ್ಕೆ ವಿಧಾನಪರಿಷತ್ತಿನಲ್ಲಿಂದು ಅಂಗೀಕಾರ ನೀಡಲಾಗಿದೆ.