ರಾಜ್ಯಶೀಘ್ರದಲ್ಲೆ ರಾಜ್ಯದಲ್ಲಿ ಹೋಟೆಲ್ ಬುಕಿಂಗ್ ರೀತಿ ಕೋವಿಡ್ ರೋಗಿಗಳಿಗೆ ಆಸ್ಪತ್ರೆ ಬೆಡ್ ಹಂಚಿಕೆ ವ್ಯವಸ್ಥೆ!
ಕೊರೋನಾ ಎರಡನೆಯ ಅಲೆಯ ತೀವ್ರತೆಯಿಂದ ರಾಜ್ಯ ಸಂಕಷ್ಟಕ್ಕೆ ಸಿಲುಕಿತ್ತು. ಅಲ್ಲದೆ ಹಾಸಿಗೆ ಹಂಚಿಕೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಬುದ್ದಿ ಕಲಿತ ರಾಜ್ಯ ಮತ್ತು ಬಿಬಿಎಂಪಿ ಯುದ್ಧ ವಾರ್ ರೂಂನಲ್ಲಿ ಕೆಲಸ ಮಾಡುವ ತಜ್ಞರು ಮತ್ತು ಅಧಿಕಾರಿಗಳು ಹೊಸ ವ್ಯವಸ್ಥೆಯನ್ನು ತಂದಿದ್ದಾರೆ.