ರಾಜ್ಯಬಿಡಿಎ ಸೇವೆಗಳು ಶೀಘ್ರವೇ `ಜನಸೇವಕ’ ವ್ಯಾಪ್ತಿಗೆ: ಸಚಿವ ಅಶ್ವತ್ಥನಾರಾಯಣ
ಆಧಾರ್ ಕಾರ್ಡಿನಿಂದ ಹಿಡಿದು ಭೂ ಹಿಡುವಳಿ ಪ್ರಮಾಣ ಪತ್ರದವರೆಗೆ 79 ಅಗತ್ಯ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸುವ `ಜನಸೇವಕ’ ಯೋಜನೆ ವ್ಯಾಪ್ತಿಗೆ ಸದ್ಯದಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಸೇವೆಗಳನ್ನೂ ಸೇರಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.