ದೇಶಬಗ್ಗದ ಗಂಗೂಲಿ- ತಗ್ಗದ ಬಿಜೆಪಿ: ರಾಜಕೀಯ ಪ್ರವೇಶಕ್ಕೆ 'ದಾದಾ' ನಿರಾಕರಣೆ; ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಕಡೆಗಣನೆ!
ಸೌರವ್ ಗಂಗೂಲಿ, ಬಂಗಾಳಿಯರ ಪ್ರೀತಿಯ 'ದಾದಾ' ಸುದ್ದಿಯಲ್ಲಿದ್ದಾರೆ. ಅದು ಕ್ರಿಕೆಟ್ ನಿಂದಾಚೆಗೆ ರಾಜಕೀಯಕ್ಕೆ ಹೊರಳಿರುವುದು ಈಗಿನ ಸುದ್ದಿ. ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿಯವರ ಬಿಸಿಸಿಐ ಅಧ್ಯಕ್ಷ ಪಟ್ಟ ಕೊನೆಗೊಳ್ಳುತ್ತಿರುವ ಸಂದರ್ಭದಲ್ಲಿ ಕ್ರಿಕೆಟ್ ಬಿಟ್ಟು ರಾಜಕೀಯ ವಿಷಯಕ್ಕೆ ಸುದ್ದಿಯಾಗುತ್ತಿದ್ದಾರೆ.