ವಿಶೇಷವಿರಾಮದ ಸಮಯದಲ್ಲಿ ಬಡ, ನಿರ್ಗತಿಕ ಮಕ್ಕಳಿಗೆ ಶಿಕ್ಷಣ ಹೇಳಿಕೊಡುವ ಬೆಂಗಳೂರಿನ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ!
ನಮ್ಮ ನಿತ್ಯಜೀವನದಲ್ಲಿ ಕಂಡುಬರುವ, ನಮ್ಮ ಜೀವನದಲ್ಲಿ ಹಾದುಹೋಗುವ ಕೆಲವು ವ್ಯಕ್ತಿಗಳು ನಮ್ಮ ಮೇಲೆ ಸ್ಪೂರ್ತಿ, ಉತ್ಸಾಹ ತುಂಬುತ್ತಾರೆ, ಪ್ರಭಾವ ಬೀರುತ್ತಾರೆ. ಅಂಥವರಲ್ಲಿ ಬೆಂಗಳೂರಿನ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಶಾಂತಪ್ಪ ಜಡೆರ್ಮನ್ನವರ್ ಒಬ್ಬರು.