ರಾಜ್ಯಬೆಂಗಳೂರು: ಬಸವೇಶ್ವರ ನಗರದ NPS ಶಾಲೆಯಲ್ಲಿ ಬಾಂಬ್ ಭೀತಿ, ಸ್ಥಳಕ್ಕೆ ಬಾಂಬ್ ಪತ್ತೆ, ಶ್ವಾನ ದಳ ದೌಡು
ಬೆಂಗಳೂರಿನ(Bengaluru) ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ (Bomb Threat) ಇ-ಮೇಲ್ ಬಂದಿದ್ದು, ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ಬಾಂಬ್ ಪತ್ತೆ, ಶ್ವಾನ ದಳ ದೌಡಾಯಿಸಿದ್ದು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಶಾಲೆಯಲ್ಲಿನ ಮಕ್ಕಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ.