ದೇಶ'ಅಲ್ಲಿ ನಾವು ದೇಶ ಕಾಯುತ್ತೇವೆ.. ಇಲ್ಲಿ ನಮ್ಮ ಮಕ್ಕಳಿಗೇ ರಕ್ಷಣೆ ಇಲ್ಲ..': 5 ಆಸ್ಪತ್ರೆ, 180 ಕಿಮೀ ಆ್ಯಂಬುಲೆನ್ಸ್ ಸುತ್ತಾಟ, ಚಿಕಿತ್ಸೆ ಸಿಗದೆ ಸೈನಿಕನ ಮಗು ಸಾವು!
ಉತ್ತರಾಖಂಡದ ಚಮೋಲಿ ಜಿಲ್ಲೆಯ ಚಿದಂಗಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದಿಢೀರ್ ಅನಾರೋಗ್ಯಕ್ಕೆ (ದೇಹದ ನಿರ್ಜಲೀಕರಣ-ಹೊಟ್ಟೆ ನೋವು) ತುತ್ತಾದ 1 ವರ್ಷದ ಮಗು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದೆ ಎಂದು ಹೇಳಲಾಗಿದೆ.