Bachelor Party

ರಕ್ಷಿತ್ ಶೆಟ್ಟಿಗೆ ಸಂಕಷ್ಟ: ಕಾಪಿರೈಟ್ ವಿವಾದ ಸಂಬಂಧ 20 ಲಕ್ಷ ರೂ. ಠೇವಣಿ ಇಡುವಂತೆ ದೆಹಲಿ ಹೈಕೋರ್ಟ್ ಆದೇಶ
ನವೀನ್ ಕುಮಾರ್ ಪ್ರತಿನಿಧಿಸಿರುವ MRT ಮ್ಯೂಸಿಕ್ ಸಂಸ್ಥೆಯು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, 'ನ್ಯಾಯ ಎಲ್ಲಿದೆ' ಮತ್ತು 'ಒಮ್ಮೆ ನಿನ್ನನ್ನು...' ಹಾಡುಗಳನ್ನು ಸರಿಯಾದ ಅನುಮತಿಯಿಲ್ಲದೆ ಚಿತ್ರದಲ್ಲಿ ಬಳಸಲಾಗಿದೆ ಎಂದು ಪ್ರತಿಪಾದಿಸಿದರು.

ಕಾಫಿ ರೈಟ್ ಉಲ್ಲಂಘನೆ ಆರೋಪ: ನಿರೀಕ್ಷಣಾ ಜಾಮೀನಿಗೆ ನಟ ರಕ್ಷಿತ್ ಶೆಟ್ಟಿ ಅರ್ಜಿ
ಬ್ಯಾಚುಲರ್ಸ್ ಪಾರ್ಟಿ ಸಿನಿಮಾದಲ್ಲಿ 'ನ್ಯಾಯ ಎಲ್ಲಿದೆ' ಎಂಬ ಹಾಡನ್ನು ಅನಧಿಕೃತವಾಗಿ ಬಳಸಿ ಕಾಪಿ ರೈಟ್ಸ್ ಉಲ್ಲಂಘನೆ ಮಾಡಿದ ಆರೋಪದಲ್ಲಿ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.

ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸುವುದು ವಿಭಿನ್ನ ರೀತಿಯ ಸವಾಲು: ಸಿರಿ ರವಿಕುಮಾರ್
ಸಕುಟುಂಬ ಸಮೇತ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯಂತಹ ಸಿನಿಮಾಗಳ ನಂತರ ಸಿರಿ ರವಿಕುಮಾರ್‌ಗೆ 'ಬ್ಯಾಚುಲರ್ ಪಾರ್ಟಿ' ಮೂಲಕ ಹಾಸ್ಯ ಜಗತ್ತಿಗೆ ಪ್ರವೇಶಿಸಿದ್ದಾರೆ.

ಬ್ಯಾಚುಲರ್ ಪಾರ್ಟಿ ಚಿತ್ರದ ಟ್ರೈಲರ್
ನಟ ದಿಗಂತ್ ಮತ್ತು ಲೂಸ್ ಮಾದ ಖ್ಯಾತಿಯ ಯೋಗಿ ಅಭಿನಯದ ಬ್ಯಾಚುಲರ್ ಪಾರ್ಟಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

‘ಬ್ಯಾಚುಲರ್ ಪಾರ್ಟಿ'ಯಲ್ಲಿ ಅತಿಥಿ ನಟರ ಸಮಾಗಮ; ಜ.26ಕ್ಕೆ ಚಿತ್ರ ಬಿಡುಗಡೆ
ಅಭಿಜಿತ್ ಮಹೇಶ್ ಅವರ ಚೊಚ್ಚಲ ನಿರ್ದೇಶನದ ಬ್ಯಾಚುಲರ್ ಪಾರ್ಟಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಚಿತ್ರದಲ್ಲಿ ಅತಿಥಿಗಳ ಸಮಾಗಮವಾಗಲಿದೆ.

ದಿಗಂತ್, ಲೂಸ್ ಮಾದ, ಅಚ್ಯುತ್ ಕುಮಾರ್ ಅಭಿನಯದ 'ಬ್ಯಾಚುಲರ್ ಪಾರ್ಟಿ' ಹೊಸ ಹಾಡು ಬಿಡುಗಡೆ
ಗಣರಾಜ್ಯೋತ್ಸವದಂದು ಬಿಡುಗಡೆಗೆ ಸಜ್ಜಾಗುತ್ತಿರುವ ಬ್ಯಾಚುಲರ್ ಪಾರ್ಟಿಯ ಟೀಸರ್ ಅನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬೆಂಬಲಿತ ಚಿತ್ರವು ಟೀಸರ್‌ನಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಹೊಸ ವರ್ಷಕ್ಕೆ ಇದೀಗ ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದೆ.

ಅಭಿಜಿತ್ ಮಹೇಶ್ ನಿರ್ದೇಶನದ 'ಬ್ಯಾಚುಲರ್ ಪಾರ್ಟಿ' ಬಿಡುಗಡೆಗೆ ದಿನಾಂಕ ಫಿಕ್ಸ್
ಬ್ಯಾಚುಲರ್ ಪಾರ್ಟಿ ಚಿತ್ರತಂಡ ಇತ್ತೀಚೆಗಷ್ಟೇ ನಟ ದಿಗಂತ್, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ಇರುವ ಹ್ಯಾಂಡ್ ಸ್ಕೆಚ್ ಮೂಲಕ ಡಿಸೈನ್ ಮಾಡಲಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿತ್ತು. ಇದೀಗ ಚಿತ್ರತಂಡ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.

ಕಿರಿಕ್ ಪಾರ್ಟಿ ಆಯ್ತು, ಈಗ ಬ್ಯಾಚುಲರ್ ಪಾರ್ಟಿ: 7 ವರ್ಷಗಳ ಬಳಿಕ ರಕ್ಷಿತ್ ಶೆಟ್ಟಿ ಟೀಂನಿಂದ ಬರುತ್ತಿದೆ ಹೊಸ ಸಿನಿಮಾ!
7 ವರ್ಷಗಳ ಹಿಂದೆ ರಕ್ಷಿತ್ ಶೆಟ್ಟಿ-ರಿಷಬ್ ಶೆಟ್ಟಿ ತಂಡದಿಂದ ಬಂದ “ಕಿರಿಕ್ ಪಾರ್ಟಿ” ಹಿರಿ ಕಿರಿಯರೆನ್ನದೆ ಎಲ್ಲರನ್ನೂ ರಂಜಿಸಿ ಗಲ್ಲಾಪೆಟ್ಟಿಗೆಯನ್ನು ಧೂಳೀಪಟ ಮಾಡಿ ದಾಖಲೆ ಬರೆದಿತ್ತು. ಈ ಸಿನಿಮಾ ಬಿಡುಗಡೆಯಾಗಿ ಏಳು ವರ್ಷ ಕಳೆದಿದ್ದು, ಈ ನಡುವಲ್ಲೇ ಚಿತ್ರತಂಡ ಹೊಸ ಚಿತ್ರವನ್ನು ಘೋಷಣೆ ಮಾಡಿ, ಸಿನಿಮಾದ ಫಸ್ಟ್‌ಲುಕ್'ನ್ನು ಬಿಡುಗಡೆ ಮಾಡಿದೆ.

ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿ ಸಿನಿಮಾದಿಂದ ನಟ ರಿಷಬ್ ಶೆಟ್ಟಿ ಔಟ್!, ದಿಗಂತ್ ಹೇಳಿದ್ದೇನು?
ನಟ ರಕ್ಷಿತ್ ಶೆಟ್ಟಿ, ತಮ್ಮ ಪರಂವಃ ಸ್ಟುಡಿಯೋಸ್‌ನಡಿ ನಿರ್ಮಾಪಕರಾಗಿ ಸಾಲು ಸಾಲು ಚಿತ್ರನಿರ್ಮಾಣಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ 'ಬ್ಯಾಚುಲರ್ ಪಾರ್ಟಿ' ಸಿನಿಮಾ ಘೋಷಿಸಿದ್ದ ಪರಂವಃ ಸ್ಟುಡಿಯೋಸ್‌ನಿಂದ ಹೊಸದೊಂದು ವಿಚಾರ ಕೇಳಿಬರುತ್ತಿದ್ದು, ಕಾಂತಾರ ಯಶಸ್ಸಿನಲ್ಲಿ ತೇಲುತ್ತಿರುವ ರಿಷಬ್ ಶೆಟ್ಟಿ ಅವರು ಸ್ವತಃ ಚಿತ್ರದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.

