ವಿಶೇಷ'ಸ್ಟೇ ಎಟ್ ಹೋಂ' ಸ್ಪರ್ಧೆ: ಡ್ಯಾನ್ಸ್ ಮಾಡಿ ಮನರಂಜನೆ ನೀಡಿ 1 ಕೋಟಿ ರೂ. ಗೆದ್ದ ಜೋಧ್ ಪುರದ ಕೂಲಿ ಕಾರ್ಮಿಕನ ಮಗ!
ಕೊರೋನಾ ಲಾಕ್ ಡೌನ್ ಸಮಯ ಹಲವರಿಗೆ ಹಲವು ರೀತಿಯಲ್ಲಿ ಕಷ್ಟಗಳನ್ನು ನೀಡಿದರೆ ಕೆಲವರ ಜೀವನದಲ್ಲಿ ಕೆಲವು ವಿಷಯದಲ್ಲಿ ಒಳ್ಳೆಯದನ್ನು ಮಾಡಿರಬಹುದು. ಲಾಕ್ ಡೌನ್ ನಿಂದ ಆರ್ಥಿಕವಾಗಿ ಕಷ್ಟವಾಗಿದೆ ಎಂದು ಬಹುತೇಕರು ಅನ್ನುತ್ತಿದ್ದರೆ ರಾಜಸ್ತಾನದ ಜೋಧ್ ಪುರದ 18 ವರ್ಷದ ಯುವಕನೊಬ್ಬ, ಅದೂ ಕಾರ್ಮಿಕನ ಮಗ 1 ಕೋಟಿ ರೂಪಾಯಿ ಗೆದ್ದಿದ್ದಾನೆ ಎಂದರೆ ನಂಬುತ್ತೀರಾ?