Baanadariyalli

ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ನಟನೆಯ 'ಬಾನದಾರಿಯಲ್ಲಿ' ಒಟಿಟಿಯಲ್ಲಿ ಬಿಡುಗಡೆ
ಸೆಪ್ಟೆಂಬರ್ 15 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಬಾನದರಿಯಲ್ಲಿ' ಸಿನಿಮಾ ಇದೀಗ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾ ಸಿನಿಪ್ರಿಯರಿಂದ ಸಕಾರಾತ್ಮಕ ಮೆಚ್ಚುಗೆಗೆ ಪಾತ್ರವಾಯಿತು.

ನನ್ನ ಕಥೆಗೆ ಗಣೇಶ್ ಚೆನ್ನಾಗಿ ಹೊಂದಿಕೊಳ್ಳುತ್ತಾರೆ: ನಿರ್ದೇಶಕ ಪ್ರೀತಂ ಗುಬ್ಬಿ
ಕನ್ನಡದ ನಿರ್ದೇಶಕ ಪ್ರೀತಂ ತಮ್ಮ ಸೀಮಿತ ಚಿತ್ರಕಥೆಗೆ ಹೆಸರುವಾಸಿಯಾಗಿದ್ದಾರೆ. ಹೆಚ್ಚಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಚಿತ್ರ ಮಾಡಲು ಆದ್ಯತೆ ನೀಡುತ್ತಾರೆ.

'ಬಾನದಾರಿಯಲ್ಲಿ' ಸಿನಿಮಾದ ಕಾದಂಬರಿ ಪಾತ್ರದಲ್ಲಿ ನಾನು ಕಳೆದು ಹೋಗಿದ್ದೆ: ರೀಷ್ಮಾ ನಾಣಯ್ಯ
ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಚಿತ್ರದ ಮೂಲಕ ತನ್ನ ಸಿನಿಮಾ ಪ್ರಯಾಣ ಆರಂಭಿಸಿದ ರೀಷ್ಮಾ ನಾಣಯ್ಯ, ಹಲವು ಸಿನಿಮಾಗಳ ಭಾಗವಾಗಿದ್ದಾರೆ. ಇತ್ತೀಚೆಗೆ ಉಪೇಂದ್ರ ಅವರ ಬಹು ನಿರೀಕ್ಷಿತ ನಿರ್ದೇಶನದ ಯು ಐ ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ.

ಬಾನದಾರಿಯಲಿ ಚಿತ್ರದ ಟ್ರೈಲರ್
ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರುಕ್ಮಿಣಿ ಅಭಿನಯದ ಬಾನದಾರಿಯಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ.

'ಗೋಲ್ಡನ್ ಸ್ಟಾರ್' ಗಣೇಶ್ ನಟನೆಯ 'ಬಾನದಾರಿಯಲ್ಲಿ' ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆ
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ನಿರ್ದೇಶಕ ಪ್ರೀತಂ ಗುಬ್ಬಿ ಜೋಡಿ ‘ಬಾನದಾರಿಯಲ್ಲಿ’ ಚಿತ್ರ ಸೆಪ್ಟೆಂಬರ್ 28ಕ್ಕೆ ಬಿಡುಗಡೆಯಾಗಲಿದೆ.

ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಅಭಿನಯದ 'ಬಾನದಾರಿಯಲ್ಲಿ' ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್
ಗಣೇಶ್ ಅಭಿನಯದ ಬಾನದಾರಿಯಲ್ಲಿ ಸಿನಿಮಾ ಈ ಮೊದಲು ಕಬ್ಜ ಸಿನಿಮಾ ಜೊತೆಗೆ ಮಾರ್ಚ್ 17ರಂದು ತೆರೆಕಾಣಲು ನಿರ್ಧರಿಸಲಾಗಿತ್ತು. ಆದರೆ, ಕೊನೆ ಕ್ಷಣದಲ್ಲಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಯಿತು. ಪ್ರೀತಂ ಗುಬ್ಬಿ ನಿರ್ದೇಶನದ ರೊಮ್ಯಾಂಟಿಕ್-ಅಡ್ವೆಂಚರ್ ಸಿನಿಮಾ ಈಗ ಸೆಪ್ಟೆಂಬರ್ 15 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನಟ ಗಣೇಶ್ ಮುಂದಿನ ಸಿನಿಮಾಗೆ ದಂಡುಪಾಳ್ಯ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ರಾಜು ಆ್ಯಕ್ಷನ್ ಕಟ್?
ಗೋಲ್ಡನ್ ಸ್ಟಾರ್ ಗಣೇಶ್, ಸದ್ಯ ಪ್ರೀತಂ ಗುಬ್ಬಿ ಅವರ ಬಹು ನಿರೀಕ್ಷಿತ ಚಿತ್ರ 'ಬಾನದಾರಿಯಲ್ಲಿ' ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ಮಧ್ಯೆ, ನಟ ಹಲವಾರು ನಿರ್ದೇಶಕರೊಂದಿಗೆ ಚರ್ಚೆಯಲ್ಲಿ ತೊಡಗಿರುವ ಬಗ್ಗೆ ವದಂತಿಗಳಿವೆ. ಮುಂಬರುವ ಚಿತ್ರಕ್ಕಾಗಿ ಗಣೇಶ್ ಅವರು ನಿರ್ದೇಶಕ ಶ್ರೀನಿವಾಸ್ ರಾಜು ಅವರೊಂದಿಗೆ ಕೆಲಸ ಮಾಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.

ಬಾನದಾರಿಯಲಿ ಚಿತ್ರದ ಟೀಸರ್
ಗೋಲ್ಡನ್ ಸ್ಟಾರ್ ಗಣೇಶ್, ರೇಷ್ಮಾ ನಾಣಯ್ಯ ಮತ್ತು ರುಕ್ಮಿಣಿ ಅಭಿನಯದ ಬಾನದಾರಿಯಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಪ್ರೀತಂ ಗುಬ್ಬಿ ನಿರ್ದೇಶಿಸಿದ್ದಾರೆ.

ಬಾನದಾರಿಯಲ್ಲಿ (ನೋಡು ಎಂಥ ಚಂದ) ಕೀನ್ಯಾಗೆ ತೆರಳಲಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ತಂಡ
ಗಾಳಿಪಟ 2 ಸಿನಿಮಾದ ಯಶಸ್ಸಿನ ಗುಂಗಿನಲ್ಲಿರುವ ಗೋಲ್ಡನ್ ಸ್ಟಾರ್ ಗಣೇಶ್, ತಮ್ಮ ಮುಂದಿನ ಚಿತ್ರವಾದ 'ಬಾನದಾರಿಯಲ್ಲಿ- ನೋಡು ಎಂಥ ಚಂದ'ದ ಚಿತ್ರೀಕರಣವನ್ನು ಪುನರಾರಂಭಿಸಿದ್ದಾರೆ.

