Ayman al-Zawahiri

ಅಲ್ ಖೈದಾ ಮುಖ್ಯಸ್ಥ ಜವಾಹಿರಿ ಹೆಲ್‌ಫೈರ್ ಆರ್9ಎಕ್ಸ್ ಕ್ಷಿಪಣಿ ದಾಳಿಗೆ ಬಲಿಯಾದದ್ದು ಹೇಗೆ?
ಹೆಲ್ ಫೈರ್ ಆರ್9ಎಕ್ಸ್, ಅಥವಾ ಮಿಲಿಟರಿ ಪರಿಭಾಷೆಯಲ್ಲಿ ಎಜಿಎಂ-114 ಆರ್9ಎಕ್ಸ್ ಎಂದು ಪರಿಚಿತವಾಗಿರುವ ಆಯುಧ ಅಮೆರಿಕಾ ನಿರ್ಮಿತ ಕ್ಷಿಪಣಿಯಾಗಿದ್ದು, ವ್ಯಕ್ತಿಯ ಮೇಲೆ ನಿಖರ ದಾಳಿ ನಡೆಸುವ ಸಂದರ್ಭದಲ್ಲಿ ಸುತ್ತಮುತ್ತ ಯಾರಿಗೂ ಹಾನಿಯಾಗದಂತೆ ದಾಳಿ ನಡೆಸಬಲ್ಲದು.

ಕಾಬುಲ್‌ನಲ್ಲಿ ಅಲ್ ಖೈದಾ ಮುಖ್ಯಸ್ಥನನ್ನು ಕೊಂದ ಅಮೆರಿಕದ ವೈಮಾನಿಕ ದಾಳಿಗೆ ತಾಲಿಬಾನ್ ಖಂಡನೆ
ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ನಲ್ಲಿ ನಡೆಸಿದ ವೈಮಾನಿಕ ದಾಳಿಯಲ್ಲಿ, ಅಲ್ಖೈದಾ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿಯನ್ನು ಹತ್ಯೆ ಮಾಡಿವೆ. ಈ ವಿಚಾರವನ್ನು ತಾಲಿಬಾನ್ ವಕ್ತಾರರು ಖಚಿತಪಡಿಸಿದ್ದು, ವಾರಾಂತ್ಯದಲ್ಲಿ ಕಾಬೂಲ್‌ನ ನಿವಾಸದ ಮೇಲೆ ಅಮೆರಿಕ ಡ್ರೋನ್ ದಾಳಿ ನಡೆಸಿದೆ ಎಂದಿದ್ದಾರೆ.

ಅಲ್‌ಕೈದಾ ಉಗ್ರ ಸಂಘಟನೆ ಮುಖ್ಯಸ್ಥ, 9/11 ದಾಳಿಯ ಮಾಸ್ಟರ್ ಮೈಂಡ್ ಆಯ್ಮಾನ್ ಅಲ್ ಝವಾಹಿರಿ 21 ವರ್ಷಗಳ ಬಳಿಕ ಹತ್ಯೆ
ವಿಶ್ವದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ, ಸೆಪ್ಟೆಂಬರ್ 11, 2001ರ ವಿಶ್ವ ವಾಣಿಜ್ಯ ಸಂಸ್ಥೆ ಮೇಲಿನ ದಾಳಿಯ ಮಾಸ್ಟರ್‌ಮೈಂಡ್ ಅಲ್-ಖೈದಾ ಮುಖ್ಯಸ್ಥ ಅಯ್ಮನ್ ಅಲ್-ಜವಾಹಿರಿಯನ್ನು ಅಮೆರಿಕ ಹತ್ಯೆ ಮಾಡಿದೆ.

9/11 ವಿಡಿಯೋದಲ್ಲಿ ಕಾಣಿಸಿಕೊಂಡ ಅಲ್ ಖೈದಾ ಮುಖ್ಯಸ್ಥ ಜವಾಹಿರಿ: ಸಾವಿನ ಸುದ್ದಿಗಳಿಗೆ ತೆರೆ
ಈ ಹಿಂದೆ ಜವಾಹಿರಿ ಸತ್ತಿದ್ದಾನೆ ಎಂದೇ ಹೇಳಲಾಗಿತ್ತು. ಅದರ ನಡುವೆಯೇ ಆತನ ವಿಡಿಯೋ ಬಿಡುಗಡೆಯಾಗಿದೆ. ವಿಡಿಯೋದಲ್ಲಿ ಆತ ಜೆರೂಸಲೇಂ ಕುರಿತು ಮಾತನಾಡಿದ್ದಾನೆ.

