ದೇಶವಾಹನಗಳಿಗೆ ಜಿಎಸ್ಟಿ ದರ ಇಳಿಕೆ ನಿರ್ಧಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು: ಗಡ್ಕರಿ
ವಾಹನ ಉದ್ಯಮಗಳು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ವಾಹನಗಳ ಜಿಎಸ್ಟಿ ದರವನ್ನು ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜಿಎಸ್ಟಿ ಕೌನ್ಸಿಲ್ ಜೊತೆಗೆ ಹಣಕಾಸು ಸಚಿವಾಲಯ ಚರ್ಚಿಸಬೇಕಿದೆ. ತಾವು ಈಗಾಗಲೇ ಹಣಕಾಸು ಸಚಿವರೊಂದಿಗೆ ಈ ಕುರಿತಂತೆ ಮಾತನಾಡಿದ್ದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.