ದೇಶಅಟಲ್ ಮಿಷನ್ ಅಡಿ ಕೇಂದ್ರದಿಂದ 6,000 ಕೋಟಿ ರೂ. ಮಂಜೂರು: ಕರ್ನಾಟಕ ಸೇರಿ 7 ರಾಜ್ಯಗಳಲ್ಲಿ ಯೋಜನೆ ಜಾರಿ
ಅಂತರ್ಜಲ ವಾರ್ಷಿಕ ಶೇ. 20 ರ ಪ್ರಮಾಣದಲ್ಲಿ ಶೀಘ್ರವಾಗಿ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ, ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ಸಂಪನ್ಮೂಲಗಳ ಸುಸ್ಥಿರ ನಿರ್ವಹಣೆಗಾಗಿ ಕೇಂದ್ರ ಸರ್ಕಾರ ಅಟಲ್ ಮಿಷನ್ ಅಡಿ 6,000 ಕೋಟಿ ರೂ. ಒದಗಿಸಿದೆ ಎಂದು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಗುರುವಾರ ಲೋಕಸಭೆಗೆ ತಿಳಿಸಿದ್ದಾರೆ.