ದೇಶಶಾರದಾ ಚಿಟ್ ಫಂಡ್ ಹಗರಣ: ನಳಿನಿ ಚಿದಂಬರಂ ಸೇರಿದಂತೆ ಇತರರಿಗೆ ಸೇರಿದ 6 ಕೋಟಿ ರೂ. ಮೌಲ್ಯದ ಆಸ್ತಿ ಮುಟ್ಟುಗೋಲು
ಬಹುಕೋಟಿ ಶಾರದಾ ಚಿಟ್ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಮತ್ತು ಸಿಪಿಎಂ ಮಾಜಿ ಶಾಸಕ ದೇವೇಂದ್ರನಾಥ್ ಬಿಸ್ವಾಸ್ ಸೇರಿದಂತೆ ಇತರರಿಗೆ ಸೇರಿದ 6 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಶುಕ್ರವಾರ ತಿಳಿಸಿದೆ.