ದೇಶಉತ್ತರ ಪ್ರದೇಶ: ನಾಮಪತ್ರ ಸಲ್ಲಿಸಲು 'ಚಟ್ಟ'ದಲ್ಲಿ ಆಗಮಿಸಿದ ಪಕ್ಷೇತರ ಅಭ್ಯರ್ಥಿ!
ಉತ್ತರ ಪ್ರದೇಶದ ಗೋರಖ್ ಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಪಕ್ಷೇತರ ಅಭ್ಯರ್ಥಿ ರಾಜನ್ ಯಾದವ್ ಮಂಗಳವಾರ 'ಚಟ್ಟ'ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ‘ಆರ್ತಿ ಬಾಬಾ’ ಎಂದೇ ಹೆಸರಾಗಿರುವ ಯಾದವ್,ಎಂಬಿಎ ಮಾಡಿದ್ದರೂ ಈಗ ಬೌದ್ಧ ಸನ್ಯಾಸಿಯಾಗಿದ್ದು, ಭಿಕ್ಷೆಯಿಂದ ಜೀವನ ನಡೆಸುತ್ತಿರುವುದಾಗಿ ಹೇಳುತ್ತಾರೆ.