ರಾಜ್ಯಬೆಳಗಾವಿ: ಮಾರ್ಕೆಟ್ ಪೊಲೀಸರಿಂದ ಕಳ್ಳನ ಬಂಧನ, 10 ಲಕ್ಷ ರೂ. ಮೌಲ್ಯದ ಬೆಲೆಬಾಳುವ ವಸ್ತುಗಳು ವಶಕ್ಕೆ
ಬೆಳಗಾವಿಯ ಸಮರ್ಥ ನಗರದಲ್ಲಿ ಮನೆಗಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಮಾರ್ಕೆಟ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ನಿಪ್ಪಾಣಿ ನಿವಾಸಿ ಯಾಸೀನ್ ಹಾಶಿಮ್ ಶೇಖ್ (23) ಎಂದು ಗುರುತಿಸಲಾಗಿದೆ.