ರಾಜ್ಯನಗರದಲ್ಲಿ ಹೆಚ್ಚಿದ ಬೀದಿನಾಯಿಗಳ ಹಾವಳಿ: ರೇಬಿಸ್ ನಿರೋಧಕ ಲಸಿಕೀಕರಣ ಕಾರ್ಯ ಚುರುಕುಗೊಳಿಸಿದ ಬಿಬಿಎಂಪಿ
ಇತ್ತೀಚೆಗೆ ಆರ್ಆರ್ನಗರ ವಲಯದಲ್ಲಿ ಎಂಟು ವರ್ಷದ ಮಗುವಿಗೆ ನಾಯಿ ಕಚ್ಚಿದ ಪ್ರಕರಣ ಬಳಿಕ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿದ್ದು, ಬೀದಿ ನಾಯಿಗಳಿಗೆ ರೇಬಿಸ್ ವಿರೋಧಿ ಲಸಿಕೆ ನೀಡುವ ಕಾರ್ಯವನ್ನು ಚುರುಕುಗೊಳಿಸಿದೆ.