ಕ್ರಿಕೆಟ್ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿ ಬಿಡುಗಡೆ ಮಾಡಿದ ಬಿಸಿಸಿಐ: ಬಿ ಗ್ರೇಡ್ ಗಿಳಿದ ಮಿಥಾಲಿ ರಾಜ್
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಮಹಿಳಾ ತಂಡದ ವಾರ್ಷಿಕ ಆಟಗಾರರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಂಡದ ನಾಯಕಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಎ ಗ್ರೇಡ್ ನಿಂದ ಬಿ ಗ್ರೇಡ್ ಗೆ ಇಳಿದಿದ್ದಾರೆ. ರಾಧಾ ಯಾದವ್ ಮತ್ತು ತನಿಯಾ ಭಾಟಿಯಾ ಅವರನ್ನು ಬಿ ಗ್ರೇಡ್ ಗೆ ಹೆಚ್ಚಿಸಲಾಗಿದೆ.