Anna from Mexico

ಡಾಲಿ ನಟನೆಯ 'ಅಣ್ಣ ಫ್ರಮ್ ಮೆಕ್ಸಿಕೋ' ಕ್ರಿಸ್‌ಮಸ್‌ಗೆ ರಿಲೀಸ್; ವರ್ಷಾಂತ್ಯಕ್ಕೆ ಬ್ಯಾಕ್ ಟು ಬ್ಯಾಕ್ ಅಬ್ಬರಿಸಲು ರೆಡಿಯಾದ ನಟರಾಕ್ಷಸ
ಬಡವ ರಾಸ್ಕಲ್ ಯಶಸ್ಸಿನ ನಂತರ ನಟ ಧನಂಜಯ್ ಹಾಗೂ ನಿರ್ದೇಶಕ ಶಂಕರ್ ಗುರು ಒಂದಾಗಿರುವ ಅಣ್ಣ ಫ್ರಮ್ ಮೆಕ್ಸಿಕೋ ಸಿನಿಮಾ ಇದೇ ವರ್ಷ ಡಿಸೆಂಬರ್ 24ರಂದು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಅಣ್ಣ from Mexico ಚಿತ್ರದ ಟೀಸರ್

'ಅಣ್ಣ from Mexico' ಚಿತ್ರದ ಟೀಸರ್ ಬಿಡುಗಡೆ: ಕನ್ನಡ ಚಿತ್ರರಂಗ ಶ್ರೀಮಂತ ಪರಂಪರೆ ಹೊಂದಿದೆ- ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಕನ್ನಡ ಚಲನ ಚಿತ್ರರಂಗ ಶ್ರೀಮಂತ ಪರಂಪರೆಯನ್ನು ಹೊಂದಿದೆ. ನಾನು ಕನ್ನಡ ಸಿನಿಮಾಗಳನ್ನು ಪ್ರೀತಿಸುವೆ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡ ದೊಡ್ಡ ಸಿನಿಮಾಗಳನ್ನು ನಿರ್ಮಿಸುವ ಆಸೆ ಇದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಡಾಲಿ ಧನಂಜಯ ಅಭಿನಯದ 'ಅಣ್ಣಾ ಫ್ರಂ ಮೆಕ್ಸಿಕೋ' ಚಿತ್ರದ ಟೀಸರ್

Anna From Mexico: ಡಾಲಿ ಧನಂಜಯಗೆ ರೀಷ್ಮಾ ನಾಣಯ್ಯ ಜೋಡಿ
ಅಣ್ಣ ಫ್ರಮ್ ಮೆಕ್ಸಿಕೋ ಧನಂಜಯ್ ಮತ್ತು ನಿರ್ದೇಶಕ ಶಂಕರ್ ಗುರು ನಡುವಿನ ಎರಡನೇ ಸಿನಿಮಾವಾಗಿದೆ. ಅವರು ಈ ಹಿಂದೆ ಬಡವ ರಾಸ್ಕಲ್ ಸಿನಿಮಾದಲ್ಲಿ ಜೊತೆಯಾಗಿದ್ದರು.

ಸಾಲು ಸಾಲು ಚಿತ್ರಗಳಲ್ಲಿ ಧನಂಜಯ್ ಬ್ಯುಸಿ; ಅಣ್ಣ from Mexico ಗಾಗಿ ಹಳ್ಳಿ ಅವತಾರದಲ್ಲಿ ನಟ ಮಿಂಚಿಂಗ್
ಸದ್ಯ ಹಲವು ಯೋಜನೆಗಳಲ್ಲಿ ಬ್ಯುಸಿಯಾಗಿರುವ ನಟ ಧನಂಜಯ್ ಇದೀಗ ಶಂಕರ್ ಗುರು ನಿರ್ದೇಶನದ 'ಅಣ್ಣ ಫ್ರಂ ಮೆಕ್ಸಿಕೋ'ದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಇದೀಗ ನಟನ ಇತ್ತೀಚಿನ ಆನ್-ಸೆಟ್ ಫೋಟೊ ಬಿಡುಗಡೆಯಾಗಿದ್ದು, ಬಿಳಿ ಅಂಗಿ ಮತ್ತು ಧೋತಿಯನ್ನು ಧರಿಸಿ ಗ್ರಾಮೀಣ ಭಾಗದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

'ಅಣ್ಣ From Mexico'ಗಾಗಿ ಮತ್ತೆ ಒಂದಾದ 'ಬಡವ ರಾಸ್ಕಲ್' ಜೋಡಿ
ಅಣ್ಣ From Mexico'ಗಾಗಿ 'ಬಡವ ರಾಸ್ಕಲ್' ಚಿತ್ರತಂಡ ಮತ್ತೆ ಒಂದಾಗಿದೆ. ಚಿತ್ರತಂಡ ಸದ್ದಿಲ್ಲದೇ ಶುಕ್ರವಾರ ಚಿತ್ರದ ಮುಹೂರ್ತ ಮುಗಿಸಿದ್ದು, ಚಿತ್ರೀಕರಣಕ್ಕಾಗಿ ಸಿದ್ಧತೆ ಶುರು ಮಾಡಿದೆ.

'ಬಡವ ರಾಸ್ಕಲ್' ಬಳಿಕ ಶಂಕರ್ ಗುರು-ಧನಂಜಯ್ ಕಾಂಬಿನೇಶನ್‌ನಲ್ಲಿ 'ಅಣ್ಣ from Mexico' ಚಿತ್ರ ಘೋಷಣೆ
ಬಡವ ರಾಸ್ಕಲ್ ಚಿತ್ರದ ಮೂಲಕ ಯಶಸ್ಸು ಕಂಡ ನಿರ್ದೇಶಕ ಹಾಗೂ ನಟ ಶಂಕರ್ ಗುರು ಮತ್ತು ನಟ ಧನಂಜಯ್ ಇದೀಗ ಮತ್ತೊಮ್ಮೆ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇದೀಗ, 'ಅಣ್ಣ from Mexico' ಎಂಬ ವಿಭಿನ್ನ ಶೀರ್ಷಿಕೆ ಹೊಂದಿರುವ ಕಾಮಿಡಿ ಮತ್ತು ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಮೂಲಕ ಒಂದಾಗುತ್ತಿದ್ದಾರೆ.

