ರಾಜ್ಯಕೊಲೆಗಾರರಿಗೆ ಸಂಬಂಧಪಟ್ಟ ಕಾನೂನನ್ನು ಪ್ರಾಣಿ ಹತ್ಯೆ ಮಾಡುವವರಿಗೆ ಅನ್ವಯಿಸಲು ಸಾಧ್ಯವಿಲ್ಲ: ಹೈಕೋರ್ಟ್
ಕೊಲೆಗಾರರನ್ನು ಶಿಕ್ಷಿಸಲು ಅನ್ವಯವಾಗುವ ಕ್ರಿಮಿನಲ್ ಕಾನೂನುಗಳನ್ನು ಪ್ರಾಣಿಹಂತಕರ ವಿಚಾರಣೆಗೆ ಅನ್ವಯಿಸಬೇಕು ಎಂಬ ವಾದವನ್ನು ತಿರಸ್ಕರಿಸಿರುವ ಕರ್ನಾಟಕ ಹೈಕೋರ್ಟ್, ನಾಯಿಯನ್ನು ಕೊಂದಿದ್ದರಿಂದ ಐಪಿಸಿ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.