ಸಿನಿಮಾ ಸುದ್ದಿಸಂಪೂರ್ಣ ರೋಮ್ಯಾಂಟಿಕ್ ಹಾಸ್ಯ ಮಿಶ್ರಿತ 'ಅಲಂಕಾರ್ ವಿದ್ಯಾರ್ಥಿ'ಗೆ ಪ್ರಮೋದ್ ನಾಯಕ!
ಇಂಗ್ಲಿಷ್ ಮಂಜ ಚಿತ್ರದ ಚಿತ್ರೀಕರಣ ಮುಗಿಸಿರುವ ನಟ ಪ್ರಮೋದ್, ತಮ್ಮ ಮುಂದಿನ ಚಿತ್ರ ಅಲಂಕಾರ್ ವಿದ್ಯಾರ್ಥಿಗೆ ಹಿಂದೆ ಮುಂದೆ ನೋಡದೆ ಸಹಿ ಹಾಕಿದ್ದಾರೆ. ಈ ಹಿಂದೆ ನಿರ್ದೇಶಕ ಸುನಿಗೆ ಸಹಾಯ ಮಾಡಿದ್ದ ಕೇಶವ್ ಈ ಚಿತ್ರದ ಮೂಲಕ ಚೊಚ್ಚಲ ಬಾರಿಗೆ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.