ದೇಶವಿಧವೆ ಎನಿಸಿಕೊಳ್ಳಲು ಇಷ್ಟವಿಲ್ಲ, ವಿಚ್ಛೇದನ ನೀಡಿ.. ಆ ಮೇಲೆ ಗಲ್ಲಿಗೇರಿಸಿ: ಕೋರ್ಟ್ ಗೆ ನಿರ್ಭಯಾ ದೋಷಿ ಅಕ್ಷಯ್ ಪತ್ನಿ ಮನವಿ
2012 ದೆಹಲಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ದಿನಕ್ಕೊಂದು ತಂತ್ರ ಹೂಡುತ್ತಿರುವ ಬೆನ್ನಲ್ಲೇ ಇತ್ತ ಪ್ರಕರಣದ ಅಪರಾಧಿ ಅಕ್ಷಯ್ ಠಾಕೂರ್ ಪತ್ನಿ ವಿಚ್ಛೇಧನ ನೀಡದ ಹೊರತು ಗಲ್ಲು ಶಿಕ್ಷೆ ಜಾರಿ ಮಾಡಬಾರದು ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.