ವಿದೇಶಆಫ್ಘಾನಿಸ್ತಾನದಲ್ಲಿ ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್ಲಿಫ್ಟ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್
ಆಫ್ಘಾನಿಸ್ತಾನದಲ್ಲಿ ಹಾಲಿ ಪರಿಸ್ಥಿತಿ ಕುರಿತಂತೆ ಜಗತ್ತಿನಾದ್ಯಂತ ವ್ಯಾಪಕ ಟೀಕೆಗಳು ಎದುರಾಗುತ್ತಿರುವ ಬೆನ್ನಲ್ಲೇ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಇತಿಹಾಸದ ಅತಿದೊಡ್ಡ ಮತ್ತು ಅತ್ಯಂತ ಕಷ್ಟಕರವಾದ ಏರ್ಲಿಫ್ಟ್ ಅಮೆರಿಕ ಸೇನೆ ಆಫ್ಘಾನಿಸ್ತಾನದಲ್ಲಿ ನಡೆಸುತ್ತಿದೆ ಎಂದು ಹೇಳಿದ್ದಾರೆ.