ರಾಜ್ಯಬಿಸಿಲ ಧಗೆಗೆ ಪ್ರಾಣಿಗಳು ಕಂಗಾಲು: ಮೈಸೂರು ಮೃಗಾಲಯದಲ್ಲಿ 'ಏರ್ ಕೂಲರ್'ಗಳ ಅಳವಡಿಕೆ
ಬೇಸಿಗೆ ಆರಂಭವಾಗುತ್ತಿದ್ದಂತೆ ತಾಪಮಾನ ಹೆಚ್ಚಾಗುತ್ತಿದ್ದು, ಮನುಷ್ಯರಷ್ಟೇ ಅಲ್ಲದೆ, ಪ್ರಾಣಿಗಳು ಕೂಡ ತತ್ತರಿಸಿ ಹೋಗುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಆರಾಮದಾಯಕ ವಾತಾವರಣದಲ್ಲಿರುವಂತೆ ಮಾಡಲು 130 ವರ್ಷಗಳಷ್ಟು ಹಳೆಯದಾದ ಮೈಸೂರು ಮೃಗಾಲಯದಲ್ಲಿ ಏರ್ ಕೂಲರ್ ಗಳನ್ನು ಅಳವಡಿಸಲಾಗುತ್ತಿದೆ.