agri laws

ಎಂಎಸ್‌ಪಿ ಗ್ಯಾರೆಂಟಿ ಆಗೋವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ: ಪ್ರಧಾನಿ ಮೋದಿಗೆ ಎಸ್‌ಕೆಎಂ ಪತ್ರ
ಕೇಂದ್ರ ಸರ್ಕಾರವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವವರೆಗೆ ಮತ್ತು ಕನಿಷ್ಠ ಬೆಂಬಲ ಬೆಲೆ(ಎಂಎಸ್ ಪಿ) ಖಾತ್ರಿಪಡಿಸುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ರೈತ ಸಂಘಟನೆಗಳು ತಿಳಿಸಿವೆ. ದೆಹಲಿಯ ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಕೃಷಿ ಕಾಯ್ದೆ ವಿರೋಧಿಸಿ ಜಂತರ್ ಮಂತರ್‌ನಲ್ಲಿ 200 ರೈತರಿಂದ ಪ್ರತಿಭಟನೆ: ಭಾರೀ ಭದ್ರತೆ
ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಜಂತರ್ ಮಂತರ್‌ನಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದು ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ.

ಸಂಸತ್ತಿನಲ್ಲಿ ರೈತರ ಬೇಡಿಕೆ ವಿಷಯ ಮುನ್ನೆಲೆಗೆ ತನ್ನಿ: ವಿರೋಧ ಪಕ್ಷಗಳಿಗೆ ಸಂಯುಕ್ತ ಕಿಸಾನ್ ಮೋರ್ಚಾ ಒತ್ತಾಯ
ಮುಂಬರುವ ಮುಂಗಾರು ಅಧಿವೇಶನದಲ್ಲಿ ಇತರ ಯಾವುದೇ ವಿಷಯಗಳ ಚರ್ಚೆಗೂ ಮುನ್ನ ನೂತನ ಮೂರು ಕೃಷಿ ಕಾಯ್ದೆ ಮತ್ತು ಎಂಎಸ್ಪಿಗಳ ಕುರಿತ ರೈತರ ಬೇಡಿಕೆ ಸಂಸತ್ತಿನಲ್ಲಿ ಚರ್ಚೆಯಾಗುವಂತೆ ವಿರೋಧ ಪಕ್ಷಗಳು ಒತ್ತಡ ಹೇರುವಂತೆ ಒತ್ತಾಯಿಸುವುದಾಗಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಹೇಳಿದೆ.

500 ರೈತರು ಮೃತಪಟ್ಟರು ಎದೆಗುಂದದೆ ರೈತರಿಂದ ನಿರಂತರ ಪ್ರತಿಭಟನೆ: ರಾಹುಲ್ ಗಾಂಧಿ
ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸುಮಾರು 500 ಮಂದಿ ರೈತರು ಜೀವ ಕಳೆದುಕೊಂಡಿದ್ದರೂ ರೈತರು ಎದೆಗುಂದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ರೈತರು-ಸರ್ಕಾರದ ನಡುವಿನ ಮಾತುಕತೆ ವಿಫಲ: ಜ.4ರಂದು ಮತ್ತೊಂದು ಸುತ್ತಿನ ಮಾತುಕತೆ!
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆ ವಾಪಸ್ ಪಡೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರತಿನಿಧಿಗಳ ಜೊತೆ ಕೇಂದ್ರ ಸರ್ಕಾರ ನಡೆಸಿದ ಮಾತುಕತೆ ಮತ್ತೊಮ್ಮೆ ವಿಫಲವಾಗಿದ್ದು ಬಿಕ್ಕಟ್ಟು ಮುಂದುವರೆದಿದೆ.

ಕೃಷಿ ಕಾಯ್ದೆಯಿಂದ ರೈತರ ಹಿತಾಸಕ್ತಿಗೆ ಧಕ್ಕೆಯಾದರೆ ತಿದ್ದುಪಡಿಗೆ ಸಿದ್ಧ: ರಾಜನಾಥ್ ಸಿಂಗ್
ರೈತರ ಕೃಷಿ ಸುಧಾರಣಾ ಕಾನೂನುಗಳನ್ನು ಒಂದು ವರ್ಷ ಜಾರಿಗೆ ತರಲಿ ನಂತರ ಅವುಗಳಿಂದ ರೈತರಿಗೆ ಏನೇನು ಲಾಭದಾಯಕವಲ್ಲ, ಪ್ರಯೋಜನವಲ್ಲ ಎಂದು ಸಾಭೀತಾದರೆ ಅಗತ್ಯ ತಿದ್ದುಪಡಿಗೆ ಸರ್ಕಾರ ಸಿದ್ಧ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ವರ್ಷಾಂತ್ಯಕ್ಕೆ ಮುನ್ನ ರೈತರ ಸಮಸ್ಯೆಗಳಿಗೆ ಪರಿಹಾರ ಸಿಕ್ಕಲಿದೆ ಎಂಬ ಭರವಸೆ ಇದೆ: ಕೇಂದ್ರ ಸಚಿವ ತೋಮರ್
ಹೊಸ ವರ್ಷಕ್ಕೆ ಮುನ್ನ ಮೂರು ನೂತನ ಕೃಷಿ ಕಾನೂನುಗಳ ವಿರುದ್ಧ ರೈತರ ಹೋರಾಟವನ್ನು ಶಾಂತಗೊಳಿಸುವ ಭರವಸೆಯನ್ನು ಸರ್ಕಾರ ಹೊಂದಿದೆ, ಬಿಕ್ಕಟ್ಟನ್ನು ಬಗೆಹರಿಸಲುವಿವಿಧ ಗುಂಪುಗಳೊಂದಿಗೆ ಅನೌಪಚಾರಿಕ ಸಂವಾದವನ್ನು ಮುಂದುವರಿಸುತ್ತಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಇದೇ ವೇಳೆ ಕಾಯ್ದೆಗಳ ರದ್ದತಿಗೆ ಬದಲಾಗಿ ಇನ್ನಿತರೆ ರೀತಿಗಳಿಂದ ರೈತರಿಗೆ ಅನುಕೂಲ

ರೈತರ ಪ್ರತಿಭಟನೆ: ನಾಳೆ ಹೊಸ ಕೃಷಿ ಕಾನೂನಿನ 'ಪ್ರಯೋಜನಗಳು' ಕುರಿತು ಪ್ರಧಾನಿ ಮೋದಿ ಭಾಷಣ
ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೆಹಲಿಯ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 22 ದಿನ ತಲುಪಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕೃಷಿ ಕಾನೂನುಗಳ ಪ್ರಯೋಜನೆಗಳ ಕುರಿತು ಶುಕ್ರವಾರ ಮಾತನಾಡಲಿದ್ದಾರೆ.

