ದೇಶ'ಅಫ್ತಾಬ್ ನನ್ನನ್ನು ಕೊಂದು ತುಂಡು ಮಾಡಿ ಎಸೆಯುತ್ತಾನೆ': 2020ರಲ್ಲಿ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದ ಶ್ರದ್ಧಾ ವಾಲ್ಕರ್
ದೆಹಲಿಯ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದಲ್ಲಿ ಬಗೆದಷ್ಟೂ ಮತ್ತಷ್ಟು ವಿಷಯಗಳು ಹೊರಬರುತ್ತಿವೆ. ಮಹಾರಾಷ್ಟ್ರದ ಪಲ್ಗರ್ ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಶ್ರದ್ಧಾ ವಾಲ್ಕರ್ ದೂರು ಸಲ್ಲಿಸಿರುವ ಪತ್ರವೊಂದು ಈಗ ಮುನ್ನೆಲೆಗೆ ಬಂದು ಭಾರೀ ಸದ್ದು ಮಾಡುತ್ತಿದೆ.