Afghanisthan

ಅಫ್ಘಾನ್ ರಾಜಧಾನಿ ಕಾಬೂಲ್ ನಿಂದ ಕೇವಲ ಏಳು ಮೈಲು ದೂರದ ಚಾರ್ ಅಸ್ಯಾಬ್ ಜಿಲ್ಲೆ ತಲುಪಿದ ತಾಲಿಬಾನ್!
ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನ ದಕ್ಷಿಣಕ್ಕೆ ಒಂದು ಪ್ರಾಂತ್ಯವನ್ನು ವಶಪಡಿಸಿಕೊಂಡಿದೆ ಮತ್ತು ಉತ್ತರದ ಪ್ರಮುಖ ನಗರವೊಂದರ ಮೇಲೆ ಶನಿವಾರ ಮುಂಜಾನೆ ಪ್ರಬಲ ಮಾಜಿ ಸೇನಾಧಿಕಾರಿಗಳಿಂದ ಸಮರ್ಥಿಸಲ್ಪಟ್ಟ ಬಹುಮುಖಿ ದಾಳಿಯನ್ನು ಆರಂಭಿಸಿತು ಎಂದು ಅಫ್ಘಾನ್ ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದ 2ನೇ ಅತಿದೊಡ್ಡ ನಗರ ಕಂದಹಾರ್, ಲಷ್ಕರ್ ಗಹ್ ತಾಲಿಬಾನ್ ವಶಕ್ಕೆ!
ಅಫ್ಘಾನಿಸ್ತಾನದ ಎರಡನೇ ಅತ್ಯಂತ ದೊಡ್ಡ ನಗರ ಕಂದಹಾರ್ ಹಾಗೂ ಲಷ್ಕರ್ ಗಹ್ ಅನ್ನು ಕೂಡ ತಾಲಿಬಾನ್ ಪಡೆಗಳು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ.

ಕಾಬೂಲಿನ ಸರ್ಕಾರಿ ಕಟ್ಟಡ ಮೇಲೆ ದಾಳಿ : 12 ಸಾವು, 31 ಮಂದಿಗೆ ಗಾಯ- ಆರೋಗ್ಯ ಸಚಿವಾಲಯ
ಅಪ್ಘಾನಿಸ್ತಾನದ ಕಾಬೂಲಿನಲ್ಲಿಂದು ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಸರ್ಕಾರಿ ಕಟ್ಟಡದ ಹೊರಗಡೆ ಆತ್ಮಾಹತ್ಯ ಬಾಂಬರ್ ತನ್ನನು ತಾನೇ ಸ್ಪೋಟಿಸಿಕೊಂಡಿದ್ದಾನೆ. ಪರಿಣಾಮ 12 ಮಂದಿ ಜನರು ಸಾವನ್ನಪ್ಪಿದ್ದು, 31 ಮಂದಿ ಗಾಯಗೊಂಡಿದ್ದಾರೆ.

