Adipurush

ಜನರ ಭಾವನೆಗಳಿಗೆ ನೋವಾಗಿದೆ, ಬೇಷರತ್ ಕ್ಷಮೆಯಾಚಿಸುತ್ತೇನೆ: 'ಆದಿ ಪುರುಷ್' ಚಿತ್ರ ಸಂಭಾಷಣೆಕಾರ ಮನೋಜ್
ಆದಿಪುರುಷ್ ಸಿನಿಮಾದಲ್ಲಿರುವ ತಪ್ಪನ್ನು ಒಪ್ಪಿಕೊಂಡಿರುವ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಾಶಿರ್ ಶುಕ್ಲಾ ಅವರು, ವಿವಾದಾತ್ಮಕ ಡೈಲಾಗ್ ಮೂಲಕ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಕ್ಕೆ ಜನರಲ್ಲಿ ಕ್ಷಮೆಯಾಚಿಸಿದ್ದಾರೆ.

ಆದಿಪುರುಷ್ ವಿವಾದದ ನಡುವೆಯೇ ಮತ್ತೆ ಟಿವಿಯಲ್ಲಿ ರಮಾನಂದ್ ಸಾಗರ್ ಅವರ 'ರಾಮಾಯಣ' ಮರು ಪ್ರಸಾರ
ಪ್ರಭಾಸ್ ನಟನೆಯ ನಿರ್ದೇಶಕ ಓಂ ರಾವತ್ ನಿರ್ದೇಶನ ಆದಿಪುರುಷ್ ಚಿತ್ರ ವಿವಾದಕ್ಕೀಡಾಗಿರುವಂತೆಯೇ ಇತ್ತ ಟಿವಿಯಲ್ಲಿ ರಮಾನಂದ್ ಸಾಗರ್ ಅವರ 'ರಾಮಾಯಣ' ಮರು ಪ್ರಸಾರವಾಗಲಿದೆ.

ಅಲಹಾಬಾದ್ ಹೈಕೋರ್ಟ್ ನಲ್ಲಿ ಇಂದು 'ಆದಿಪುರುಷ' ವಿರುದ್ಧದ ಅರ್ಜಿಗಳ ವಿಚಾರಣೆ
ಇತ್ತೀಚಿಗೆ ತೆರೆಕಂಡ ಪ್ರಭಾಸ್ ಅಭಿನಯದ 'ಆದಿಪುರುಷ' ಚಿತ್ರದ ವಿರುದ್ಧದ ಅರ್ಜಿಗಳ ವಿಚಾರಣೆ ಅಲಹಾಬಾದ್ ಹೈಕೋರ್ಟ್ ನಲ್ಲಿ ಇಂದು ನಡೆಯಲಿದೆ.

ಪ್ರಭಾಸ್ ನಟನೆಯ 'ಆದಿಪುರುಷ' ನೋಡಿ ತಲೆ ಚಚ್ಚಿಕೊಂಡ ಸೆಹ್ವಾಗ್! ಹೇಳಿದ್ದೇನು ನೋಡಿ...
ಸಿನಿಮಾವು ಅನೇಕ ಧಾರ್ಮಿಕ ಗುಂಪುಗಳು, ವೀಕ್ಷಕರು ಮತ್ತು ಚಲನಚಿತ್ರ ವಿಮರ್ಶಕರಿಂದ ವಿಎಫ್ಎಕ್ಸ್, ಪಾತ್ರಗಳ ಚಿತ್ರಣ ಮತ್ತು ಸಂಭಾಷಣೆಗಳಿಗಾಗಿ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ. ಈ ಎಲ್ಲಾ ಹಿನ್ನಡೆಗಳ ನಡುವೆ, ಆದಿಪುರುಷ ಚಿತ್ರವು ಭಾರತದ ಮಾಜಿ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ರೂಪದಲ್ಲಿ ಮತ್ತೊಬ್ಬ ವಿಮರ್ಶಕನನ್ನು ಪಡೆದಿದೆ.

ಕೋರ್ಟ್ ಆದೇಶ ಸ್ವೀಕರಿಸಲ್ಲ: ಯಾವುದೇ ಹಿಂದಿ ಚಲನಚಿತ್ರಗಳಿಗೆ ಅನುಮತಿ ನೀಡಲ್ಲ- ಕಠ್ಮಂಡು ಮೇಯರ್
ನ್ಯಾಯಾಲಯದ ಆದೇಶದ ಹೊರತಾಗಿಯೂ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಠ್ಮಂಡು ಮೇಯರ್ ಬಲೇನ್ ಶಾ ಗುರುವಾರ ಹೇಳಿದ್ದಾರೆ. ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಅನುಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುತ್ತಿದ್ದಂತೆಯೇ ಅದನ್ನು ಮೇಯರ್ ಶಾ ಪ್ರಶ್ನಿಸಿದ್ದಾರೆ.

ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಹೊರತುಪಡಿಸಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನ ಪುನಾರಂಭ
ನೇಪಾಳದಲ್ಲಿ ಆದಿಪುರುಷ್ ಸಿನಿಮಾ ಹೊರತುಪಡಿಸಿ ಎಲ್ಲಾ ಹಿಂದಿ ಸಿನಿಮಾಗಳ ಪ್ರದರ್ಶನವನ್ನೂ ಪುನಾರಂಭ ಮಾಡಲಾಗಿದೆ.

ಛತ್ತೀಸ್‌ಗಢ ತಲುಪಿದ ಅಮಿತ್ ಶಾ; 'ಆದಿಪುರುಷ' ಸಿನಿಮಾ ನಿಷೇಧಿಸುವಂತೆ ಸಿಎಂ ಭೂಪೇಶ್ ಬಘೇಲಾ ಮನವಿ
ರಾಮಾಯಣ ಮಹಾಕಾವ್ಯವನ್ನು ಆಧರಿಸಿದ ಆದಿಪುರುಷ ಸಿನಿಮಾದಲ್ಲಿನ ಕೆಲವು ಪಾತ್ರಗಳ ಸಂಭಾಷಣೆ, ಭಾಷೆ ಮತ್ತು ಕೆಲವು ಪಾತ್ರಗಳನ್ನು ತೋರಿಸಿರುವ ರೀತಿಗಾಗಿ ತೀವ್ರ ವಿರೋಧ ಎದುರಿಸುತ್ತಿರುವ ಚಲನಚಿತ್ರವನ್ನು ನಿಷೇಧಿಸುವಂತೆ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲಾ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗುರುವಾರ ಮನವಿ ಮಾಡಿದ್ದಾರೆ.

ಸೊರಗಿದ ಆದಿಪುರುಷ್: ಜನರನ್ನು ಸೆಳೆಯಲು ಟಿಕೆಟ್ ದರ 150 ರೂ.ಗೆ ಇಳಿಸಿದ ಚಿತ್ರತಂಡ!
ಆದಿಪುರುಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಒಂದು ವಾರವೂ ಕಳೆದಿಲ್ಲ. ಆದರೆ ವಿವಾದಗಳ ಮಾತ್ರ ಬೆಂಬಿಡದೆ ಕಾಡುತ್ತಿವೆ. ಇನ್ನು ಚಿತ್ರದ ಗಳಿಕೆ ಸೋಮವಾರದಿಂದ ಗಣನೀಯವಾಗಿ ಕಡಿಮೆಯಾಗುತ್ತಿರುವುದರಿಂದ ನಿರ್ಮಾಪಕರು ಪಿವಿಆರ್, ಐನಾಕ್ಸ್ ಮತ್ತು ಸಿನೆಪೊಲಿಸ್‌ನಂತಹ ಮಲ್ಟಿಪ್ಲೆಕ್ಸ್ 150 ರೂ ಬೆಲೆಗೆ ಟಿಕೆಟ್‌ಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ.

'ಹನುಮಂತ ದೇವರೇ ಅಲ್ಲ...' ಆದಿಪುರುಷ್ ಚಿತ್ರದ ಸಂಭಾಷಣೆಕಾರ ಮನೋಜ್ ಮುಂತಶಿರ್, ನೆಟ್ಟಿಗರ ಕಿಡಿ!
ಪ್ರಭಾಸ್ ಮತ್ತು ಕೃತಿ ಸನನ್ ಅಭಿನಯದ ಆದಿಪುರುಷ್ ಚಿತ್ರ ಬಿಡುಗಡೆಯಾದಾಗಿನಿಂದ ಒಂದರ ಹಿಂದೆ ಒಂದರಂತೆ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಇದೀಗ ಅದರ ಸಂಭಾಷಣೆಕಾರ ಹಾಗೂ ಗೀತರಚನೆಕಾರ ಮನೋಜ್ ಮುಂತಶಿರ್ ಶುಕ್ಲಾ 'ಹನುಮಂತ ದೇವರಲ್ಲ' ಎಂದು ಹೇಳಿದ್ದಾರೆ.

