ವಿದೇಶಪಾಕಿಸ್ತಾನ ಮೂಲದ ಎಲ್ ಇಟಿ ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿ ಜಾಗತಿಕ ಭಯೋತ್ಪಾದಕ: ವಿಶ್ವಸಂಸ್ಥೆ ಘೋಷಣೆ
ಪ್ರಮುಖ ಬೆಳವಣಿಗೆಯೊಂದರಲ್ಲಿ, ಪಾಕಿಸ್ತಾನ ಮೂಲದ ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೊಯ್ಬಾ(LeT)ದ ಉಪ ನಾಯಕ ಅಬ್ದುಲ್ ರೆಹಮಾನ್ ಮಕ್ಕಿಯನ್ನು ವಿಶ್ವಸಂಸ್ಥೆ ಜಾಗತಿಕ ಭಯೋತ್ಪಾದಕ ಎಂದು ಗುರುತಿಸಿದೆ. ಅಲ್ಲದೆ ಆತನಿಗೆ ಸಂಬಂಧಪಟ್ಟ ಆಸ್ತಿಗಳನ್ನು ಮುಟ್ಟುಗೋಲು ಹಾಕಿ, ಆತನ ಬಳಿಯಿಂದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವಂತೆ ಮತ್ತು ಪ್ರಯಾಣಕ್ಕೆ ನಿಷೇಧ ಹೇರಿದೆ.