ರಾಜ್ಯಭಯೋತ್ಪಾದಕರ ಶಿಕ್ಷಿಸಲು ಬಳಸುವ ಸೆಕ್ಷನ್ ರೇವಣ್ಣ ವಿರುದ್ಧ ಹಾಕಲಾಗಿದೆ: ಹಿರಿಯ ವಕೀಲ ನಾಗೇಶ್ ಪ್ರಬಲ ವಾದ
ಭಯೋತ್ಪಾದಕರನ್ನು ಶಿಕ್ಷಿಸುವ ಉದ್ದೇಶದಿಂದ ಐಪಿಸಿ ಸೆಕ್ಷನ್ 364ಕ್ಕೆ ತಿದ್ದುಪಡಿ ತರಲಾಗಿತ್ತು. ಈ ಸೆಕ್ಷನ್'ನ್ನು ಜೆಡಿಎಸ್ ಶಾಸಕ ಹೆಚ್ ಡಿ ರೇವಣ್ಣ ವಿರುದ್ಧ ಪ್ರಯೋಗಿಸಲಾಗಿದೆ ಎಂದು ಹಿರಿಯ ವಕೀಲ ಸಿ ವಿ ನಾಗೇಶ್ ಅವರು ಗುರುವಾರ ವಿಶೇಷ ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.