ದೇಶನೂತನ ಸಂಸತ್ತು ಭವನ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ನಾಣ್ಯ ಬಿಡುಗಡೆ: ಇದರ ವಿಶೇಷತೆಗಳೇನು?
ಮೇ 28 ರಂದು ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಸ್ಮರಣಾರ್ಥವಾಗಿ ಹಣಕಾಸು ಸಚಿವಾಲಯವು ವಿಶೇಷವಾಗಿ 75 ರೂಪಾಯಿ ಮುಖಬೆಲೆಯ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಸ್ಮರಣಾರ್ಥ ನಾಣ್ಯವು ದೇಶ 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿರುವುದಕ್ಕೆ ಗೌರವ ಸೂಚಕವಾಗಿದೆ.