ವಿದೇಶನೇಪಾಳದಲ್ಲಿ ವಿಮಾನ ಅಪಘಾತ: ಐವರು ಭಾರತೀಯರು ಸೇರಿದಂತೆ 68 ಪ್ರಯಾಣಿಕರ ದುರ್ಮರಣ
72 ಜನರಿದ್ದ ನೇಪಾಳದ ಪ್ರಯಾಣಿಕ ವಿಮಾನ ಭಾನುವಾರ ಪೋಖರಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುವಾಗ ನದಿಯ ದಡದಲ್ಲಿ ಪತನಗೊಂಡಿದ್ದು, 68 ಮಂದಿ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಇವರಲ್ಲಿ ಐವರು ಭಾರತೀಯರು ಸೇರಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.