ದೇಶಏಳು ರಾಜ್ಯಗಳಿಂದ 63 ಶ್ರಮಿಕ್ ವಿಶೇಷ ರೈಲುಗಳಿಗಾಗಿ ಮನವಿ, ಕರ್ನಾಟಕದಿಂದ 6 ರೈಲುಗಳಿಗೆ ಬೇಡಿಕೆ
ವಲಸೆ ಕಾರ್ಮಿಕರು ಮತ್ತು ವಿವಿಧ ರಾಜ್ಯಗಳಲ್ಲಿ ಸಿಲುಕಿರುವವರು ತಮ್ಮ ಸ್ವಂತ ಸ್ಥಳ ಸೇರಲು ರಾಜ್ಯಗಳು ಮನವಿ ಮಾಡಿದರೆ 24 ಗಂಟೆಗಳ ಒಳಗೆ ರೈಲುಗಳನ್ನು ಒದಗಿಸುವುದಾಗಿ ರೈಲ್ವೆ ಮಂಡಳಿಯ ಅಧ್ಯಕ್ಷರು ಎಲ್ಲ ರಾಜ್ಯಗಳಿಗೆ ಪತ್ರ ಬರೆದ ನಂತರ ಏಳು ರಾಜ್ಯಗಳು ಇನ್ನೂ 63 ಶ್ರಮಿಕ್ ವಿಶೇಷ ರೈಲುಗಳನ್ನು ಒದಗಿಸುವಂತೆ ಕೋರಿವೆ.